ಬಸವರಾಜ ಬೊಮ್ಮಾಯಿ ಬಿಜೆಪಿಗೆ ಮತ್ತೊಬ್ಬ ಯೋಗಿ ಅದಿತ್ಯನಾಥ್ ಆಗುವರೆ..?

 

ಬೆಂಗಳೂರು, ಏ.02,2023 : (WWW.JUSTKANNADA.IN NEWS) ಕರ್ನಾಟಕದಲ್ಲಿ ಮೇ _10 ರಂದು 224 ಕ್ಷೇತ್ರದಲ್ಲಿ ಚುನಾವಣೆ ನಡೆಯುತ್ತದೆ. ಮೇ 13 ರಂದು ಯಾವ ಪಕ್ಷಕ್ಕೆ ಬಹುಮತ ಬರುವುದೊ ಅಥವಾ ಮತದಾರ ಅತಂತ್ರ ಪಲಿತಾಂಶ ನೀಡುವನೊ ಎಂಬ ಪ್ರಶ್ನೆಗೆ ಅಂದೇ ಉತ್ತರ ಸಿಗಲಿದೆ.

ರಾಜ್ಯದ ಇತಿಹಾಸದಲ್ಲಿ 1985 ನ್ನು ಬಿಟ್ಟರೆ ಆಡಳಿತಾರೂಢ ಪಕ್ಷ ಅಧಿಕಾರ ಉಳಿಸಿಕೊಂಡ ನಿದರ್ಶನವೇ ಇಲ್ಲಾ. 1983 ರ ರಲ್ಲಿ ಪ್ರಪ್ರಥಮ ಬಾರಿಗೆ ಜನತಾ ಪಕ್ಷ, ಬಿಜೆಪಿ ಹಾಗೂ ಕ್ರಾಂತಿ ರಂಗ ನೆರವಿನಿಂದ ಮೊಟ್ಟ ಮೊದಲ ಕಾಂಗ್ರೆಸೆತರ ಸರ್ಕಾರ ರಚಿಸಿ ಇತಿಹಾಸ ಬರೆಯಿತು. ಆದರೆ ಜನತಾ ಪಕ್ಷದ ರಾಮಕೃಷ್ಣ ಹೆಗಡೆ ನೇತ್ರತ್ವದ ಸರ್ಕಾರ ಎರಡು ವರ್ಷಗಳ ಕಾಲವೂ ಬಾಳಲಿಲ್ಲಾ. ಬಿಜೆಪಿಯವರ ಕಿರುಕುಳ ಹಾಗೂ ಇನ್ನಿತರೆ ವಿರೋಧಾಭಾಸದ ಕಾರಣ ಹೆಗಡೆಯವರು ವಿಧಾನ ಸಭೆ ವಿಸರ್ಜಿಸಿ , 1985 ರಲ್ಲಿ ಚುನಾವಣೆ ಎದುರಿಸುತ್ತಾರೆ. ವಿಧಾನ ಸಭೆಯ ಚುನಾವಣೆ ಜೊತೆಗೆ ಲೋಕ ಸಭೆಯ ಚುನಾವಣೆಯೂ ನಡೆಯುತ್ತೆ.  ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ ಮತದಾರ, ವಿಧಾನ ಸಭೆಗೆ ಜನತಾ ಪಕ್ಷವನ್ನೇ ಮರಳಿ ಅಧಿಕಾರಕ್ಕೆ ತರುತ್ತಾನೆ. ಜನತಾ ಪಕ್ಷ 139 ಸ್ಥಾನ ಜಯಿಸಿ ಸ್ವಂತ ಬಲದ ಮೇಲೆ ಸರ್ಕಾರ ರಚಿಸುತ್ತೆ ಮತ್ತೆ ರಾಮಕೃಷ್ಣ ಹೆಗಡೆ ಎರಡನೇ ಬಾರಿ ಮುಖ್ಯ ಮಂತ್ರಿಯಾಗುತ್ತಾರೆ.

1988 ರಲ್ಲಿ ಆಂತರಿಕ ಜಗಳದ ಕಾರಣ ಎಸ್ ಆರ್ ಬೊಮ್ಮಾಯಿಯ ಸರ್ಕಾರ ಪತನವಾಗುತ್ತೆ. 1989 ರಲ್ಲಿ ನಡೆದ ಚುನಾವಣೆಯಲ್ಲಿ ವೀರೇಂದ್ರ ಪಾಟೀಲ್ ರ ನೇತ್ರತ್ವದಲ್ಲಿ ಕಾಂಗ್ರೆಸ್ ಪಕ್ಷ ಅಭೂತಪೂರ್ವ ಜಯ ಸಾಧಿಸಿ 167 ಕ್ಕಿಂತಲೂ ಹೆಚ್ಚು ಸ್ಥಾನ ಗಳಿಸಿ ಜನತಾ ದಳ ಸರ್ಕಾರ ಹೀನಾಯ ಸೋಲು ಅನುಭವಿಸುವಂತೆ ಆಗುತ್ತೆ. ತದ ನಂತರ ನಡೆದ ಚುನಾವಣೆಗಳಲ್ಲಿ ಅಂದರೆ 1994 ರಲ್ಲಿ ಕಾಂಗ್ರೆಸ್ ಮಣಿಸಿ ಜನತಾ ದಳ ಮತ್ತೆ ಅಧಿಕಾರದ ಗದ್ದುಗೆ ಏರಿದೆ. 1999 ರಲ್ಲಿ ಎಸ್ ಎಂ ಕೃಷ್ಣ,  ಪಾಂಚಜನ್ಯ ಮೊಳಗಿಸಿ  ಜೆ ಹೆಚ್ ಪಟೇಲರ ಜನತಾದಳ ಸಂಯುಕ್ತ ಸರ್ಕಾರವನ್ನು ಕಿತ್ತೊಗೆದು ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರುವಂತೆ ಮಾಡುತ್ತಾರೆ. 2004 ರಲ್ಲಿ ಮತದಾರ ಯಾವ ಪಕ್ಷಕ್ಕೂ ಬಹುಮತ ನೀಡದೆ ಅತಂತ್ರ ಫಲಿತಾಂಶ ನೀಡಿ ರಾಜ್ಯದಲ್ಲಿ ಪ್ರಥಮ ಬಾರಿಗೆ ಸಮ್ಮಿಶ್ರ ಸರ್ಕಾರದ ಯುಗ ಪ್ರಾರಂಭಕ್ಕೆ ನಾಂದಿ ಹಾಡಿದ.

ಸೆಕುಲರ್ ವಾದ ಮಂಡಿಸಿ ಜನರಿಂದ ತಿರಸ್ಕಾರಗೊಂಡಿದ್ದ ಕಾಂಗ್ರೆಸ್ ಮತ್ತು ದೇವೇಗೌಡರ ಜಾತ್ಯಾತೀತ ಜನತಾ ದಳ ಅವಕಾಶವಾದಿ ರಾಜಕಾರಣ ಫಲವಾಗಿ ಈ ಎರಡೂ ಪಕ್ಷಗಳು ಸರ್ಕಾರ ರಚಿಸಿ ದರಂ ಸಿಂಗ್ ಮುಖ್ಯ ಮಂತ್ರಿಯಾಗಿ ಇಪ್ಪತ್ತು ತಿಂಗಳು ಆಡಳಿತ ನಡೆಸುತ್ತಾರೆ. ಗೌಡರ ಪುತ್ರ ಕುಮಾರಸ್ವಾಮಿ ತಾವು ಮುಖ್ಯ ಮಂತ್ರಿಯಾಗುವ ಅವಕಾಶ ಇದೆ ಎಂಬ ಸುಳಿವು ಸಿಕ್ಕೊಡನೆ ಧರಂ ಸಿಂಗ್ ಸರ್ಕಾರ ಕೆಡವಿ, ಬಿಜೆಪಿಯೊಡನೆ ಸರ್ಕಾರ ರಚಿಸಿದ್ದು, ಅದೂ ಸಹ ಇಪ್ಪತ್ತು ತಿಂಗಳ ನಂತರ ಪತನವಾದ್ದು ಇತಿಹಾಸ.

2008 ರ ಚುನಾವಣೆಯಲ್ಲಿ ಮತ್ತೆ ಅತಂತ್ರ, ಬಿಜೆಪಿ ಆರು ಇಂಡಿಪೆಂರ್ಡಟ್ ಗಳ ನೆರವಿನಿಂದ ಸರ್ಕಾರ ರಚಿಸಿತು. 2013 ರಲ್ಲಿ ಬಿಜೆಪಿ ಸೋಲಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು.  ಸಿದ್ದರಾಮಯ್ಯ ಐದು ವರ್ಷ ಆಡಳಿತ ನಡೆಸಿ ಹಲವಾರ ಭಾಗ್ಯ ಗಳನ್ನು ನೀಡಿದ್ದರೂ ಜನ ಅವರ ಸರ್ಕಾರ ವನ್ನು 2018 ರಲ್ಲಿ ಮರಳಿ ತರಲಿಲ್ಲಾ.

ಆಡಳಿತಾರೂಢ ಬಿಜೆಪಿ ಅಧಿಕಾರ ಉಳಿಣಿಕೊಳ್ಳಲು ಎಣಗಾಡುತ್ತಿದೆ :

ಮತದಾರ ಸರ್ಕಾರ ಬದಲಿಸುವ ಪರಂಪರೆ ಮುಂದುವರೆಸುವನೊ ಇಲ್ಲಾ ಉತ್ತರ ಪ್ರದೇಶದಲ್ಲಿ ನಡೆದ ಪವಾಡ ನಡೆದು ಬಿಜೆಪಿಗೆ ಮರಳಿಅಧಿಕಾರ ನೀಡುವನೊ. ಬಸವರಾಜ ಬೊಮ್ಮಾಯಿ,  ಯೋಗಿ ಅದಿತ್ಯನಾಥ ಆಗುವರೊ ಇಲ್ಕಾ ಮಾಜಿಯಾಗುವರೊ ಕಾದು ನೋಡಬೇಕು.

M.SIDDARAJU, SENIOR JOURNALIST

# ಎಂ.ಸಿದ್ದರಾಜು, ಹಿರಿಯ ಪತ್ರಕರ್ತರು, ಬೆಂಗಳೂರು.

key word : karnataka-election-2023-kannada-congress-bjp-jds