ಕೋವಿಡ್ ನಿಯಂತ್ರಣ ನೆಪ, 2000 ಕೋಟಿ ರೂ.ಲೂಟಿ : ಸಿದ್ದರಾಮಯ್ಯ ಗಂಭೀರ ಆರೋಪ.

 

ಬೆಂಗಳೂರು, ಜು.03, 2020 : (www.justkannada.in news) ಕೋವಿಡ್ ನಿಯಂತ್ರಣ ನೆಪದಲ್ಲಿ ಸರಕಾರ ತೆರಿಗೆ ಹಣವನ್ನು ಲೂಟಿ ಮಾಡಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಸಿದ್ದರಾಮಯ್ಯ ಹೇಳಿದ್ದಿಷ್ಟು…

jk-logo-justkannada-logo

2000 ಕೋಟಿ ರೂಪಾಯಿಗಳಷ್ಟು ಲೂಟಿ ಆಗಿರುವ ಶಂಕೆ ಇದೆ. ಇದರ ಬಗ್ಗೆ ತನಿಖೆ ಆಗಬೇಕು. ಮಾರುಕಟ್ಟೆಯ ಪ್ರಕಾರ 1163 ಕೋಟಿ ರೂ. ಆಗಬೇಕಿತ್ತು. ಆದರೆ ಸರಕಾರದ ಬಿಲ್ 3322 ಕೋಟಿ ರೂ. ಆಗಿದೆ.
ಸ್ಯಾನಿಟೈಜಸರ್ 500mlಗೆ.600/- ರೂಪಾಯಿ. ಥರ್ಮಲ್ ಸ್ಯಾನರ್‌ ಒಂದಕ್ಕೆ 9000/-.
ಒಳ್ಳೆಯ ಸ್ಯಾನಿಟೈಜರ್ 100/- ರೂ.ಗೆ ಸಿಗುತ್ತದೆ. ಥರ್ಮಲ್ ಸ್ಯಾನರ್ 1200/- ಅಷ್ಟೇ.
ಮಾಸ್ಕ್ 200/- ಕೊಟ್ಟು ಖರೀದಿಸಿದ್ದಾರೆ. 20 ಕೋಟಿಗೆ ಮಾಸ್ಕ್ ಖರೀದಿಸಿದ್ದಾರೆ.
ಪಿಪಿಇ ಕಿಟ್‌ಗಳಲ್ಲಿ ಅವ್ಯವಹಾರ ಮಾಡಿದ್ದಾರೆ. ಒಂದಕ್ಕೆ ಮೂರು ಪಟ್ಟು ಬೆಲೆ ಕೊಟ್ಟು ಖರೀದಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರ ಶ್ವೇತ ಪತ್ರ ಹೊರಡಿಸಬೇಕು.

karnataka-covid-siddaramaiha-looty-bjp

ಎಷ್ಟು ಬೆಡ್‌ಗಳು ಇದೆ? ಎಷ್ಟು ವೆಂಟಿಲೇಟರ್ ಇದೆ? ರೋಗಿಗಳ ಸಂಖ್ಯೆ, ಐಸಿಯುನಲ್ಲಿ ಇರುವವರ ಸಂಖ್ಯೆ ಎಷ್ಟು? ಕೇಂದ್ರ ಸರ್ಕಾರ ಕೊಟ್ಟಿರುವ ವೆಂಟಿಲೇಟರ್ ಎಷ್ಟು?ಅಂಬ್ಯುಲೆನ್ಸ್‌ಗಳು ಎಷ್ಟಿದೆ? ಆಹಾರ ಇಲ್ಲ. ನೀರಿಲ್ಲ. ಅಂಬ್ಯುಲೆನ್ಸ್‌ಗಳು ಇಲ್ಲ. ಮಾಧ್ಯಮಗಳು ಎಲ್ಲವನ್ನೂ ಈಗ ವರದಿ ಮಾಡುತ್ತಿದೆ. ಬಳ್ಳಾರಿ, ಯಾದಗಿರಿಯಲ್ಲಿ ಜೆಸಿಬಿಯಲ್ಲಿ ಶವ ತಂದು ಎಸೆದಿದ್ದಾರೆ.
ರಾಜ್ಯದಲ್ಲಿ ಸರಿಯಾದ ಬೆಡ್‌ಗಳ ವ್ಯವಸ್ಥೆ ಇಲ್ಲ. ಇಲ್ಲಿಯವರು 30-40 ಸಾವಿರ ಬೆಡ್‌ಗಳನ್ನು ಸಿದ್ಧಪಡಿಸಬೇಕಿತ್ತು. ಒಟ್ಟು ರಾಜ್ಯದಲ್ಲಿ ಬೆಡ್‌ಗಳ ಸಂಖ್ಯೆ ನೋಡುವುದಾದ್ರೆ 4663. ವೈದ್ಯಕೀಯ ಕಾಲೇಜು, ಕೋವಿಡ್-19 ಆಸ್ಪತ್ರೆಯ ಎಲ್ಲಾ ಸೇರಿ 4663. ಈಗ ಇನ್ನು 1900 ಬೆಡ್‌ಗಳು ಖಾಲಿಯಿದೆ ಅನ್ನುವ ಅಂಕಿಅಂಶಗಳನ್ನು ಸರ್ಕಾರ ಕೊಡುತ್ತಿದೆ. ನಮಗೆ ಕೊಟ್ಟಿರುವ ಅಂಕಿಅಂಶಗಳನ್ನು ಹೇಳಿದ್ರೆ ರಾಜಕೀಯ ಅಂತಾರೆ. ಖಾಸಗಿ ಆಸ್ಪತ್ರೆಯವರು ಸರ್ಕಾರದ ಮಾತನ್ನು ಕೇಳುತ್ತಿಲ್ಲ.
ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಇವರದ್ದು.ವಿಕ್ರಂ ಆಸ್ಪತ್ರೆಗೆ ನೋಟಿಸ್ ಕೊಟ್ಟಿದೆ ಸರ್ಕಾರ. ಬೆಡ್‌ಗಳು ಸರಿಯಾಗಿ ಸಿಗುತ್ತಿಲ್ಲ. ಸಿದ್ಧರಾಮಯ್ಯ ಆರೋಪ.

oooo

key words : karnataka-covid-siddaramaiha-looty-bjp