ಲೋಕಸಭಾ  ಎಲೆಕ್ಷನ್ ಮೇಲೆ ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಭಾವ ಬೀರಲಿದೆ- ಮಲ್ಲಿಕಾರ್ಜುನ ಖರ್ಗೆ.

ಕಲಬುರಗಿ,ಮೇ,22,2023(www.justkannada.in):  ಮುಂದಿನ ಲೋಕಸಭೆ ಚುನಾವಣೆ ಮೇಲೆ ಕರ್ನಾಟಕ ರಾಜ್ಯ ವಿಧಾನಸಭೆ ಚುಣಾವಣೆ ಪ್ರಭಾವ ಬೀರಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ  ಹೇಳಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,  ರಾಜ್ಯದಲ್ಲಿ ನಡೆದ  ವಿಧಾನಸಭೆ ಚುನಾವಣೆ ಮುಂದಿನ ಲೋಕಸಭೆ ಚುನಾವಣೆಗೆ ಖಂಡಿತ ಪ್ರಭಾವ ಬೀರಲಿದೆ.  ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜನರು ಬೆಂಬಲ ನೀಡಿರುವುದು ನೋಡಿದ್ರೆ ಲೋಕಸಭೆ ಚುನಾವಣೆಯಲ್ಲಿ ತುಂಬಾ ಪ್ರಭಾವ ಬೀರಲಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳ ನಿರ್ಣಯ ತೆಗೆದುಕೊಂಡಿದೆ. ಯಾರಿಗೆ ಹೇಗೆ ಸೌಲಭ್ಯ ಸಿಗಬೇಕು ಎಂಬ ಬಗ್ಗೆ ಶೀಘ್ರವೇ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಮಲ್ಲಿಕಾರ್ಜುನ ಖರ್ಗೆ  ಬೀರಲಿದೆ.

Key words: Karnataka- assembly –election- impact – LokSabha- election-Mallikarjuna Kharge.