ಟೆಸ್ಟ್’ನಿಂದ ರಾಹುಲ್ ಕೈಬಿಟ್ಟಿದ್ದಕ್ಕೆ ಕಪಿಲ್ ದೇವ್ ಅಸಮಾಧಾನ

ನವದೆಹಲಿ, ಫೆಬ್ರವರಿ 25, 2020 (www.justkannada.in): ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ್ ಸೋತ ನಂತರ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಅನ್ನು ಕಪಿಲ್ ದೇವ್ ತರಾಟೆಗೆ ತೆಗೆದು ಕೊಂಡಿದ್ದಾರೆ.

ಟೀಂ ಮ್ಯಾನೇಜ್ ಮೆಂಟ್ ನ ನಡೆಯೇ ಅರ್ಥವಾಗುತ್ತಿಲ್ಲ ಎಂದು ಕಪಿಲ್ ಹೇಳಿಕೊಂಡಿದ್ದಾರೆ. ಮೊದಲ ಟೆಸ್ಟ್ ಪಂದ್ಯದ ಗೆಲುವಿಗೆ ಕಿವೀಸ್ ತಂಡಕ್ಕೆ ಶುಭಾಶಯ ಕೋರಿದ್ದಾರೆ.

ಕಳೆದ ಏಕದಿನ ಸರಣಿ ಮತ್ತು ಮೊದಲ ಟೆಸ್ಟ್ ಪಂದ್ಯದಲ್ಲಿ ಅವರು ಉತ್ತಮವಾಗಿ ಆಡಿದ್ದಾರೆ ಎಂದಿದ್ದಾರೆ. ಟೀಂ ಇಂಡಿಯಾ ಆಡುವ ಬಳಗದಲ್ಲಿ ಇಷ್ಟೊಂದು ಬದಲಾವಣೆಗಳು ಯಾಕೆ ಆಗುತ್ತಿವೆ ಎಂದೇ ನನಗೆ ಅರ್ಥವಾಗುತ್ತಿಲ್ಲ. ಪ್ರತೀ ಪಂದ್ಯಕ್ಕೂ ಇಲ್ಲಿ ತಂಡದಲ್ಲಿ ಬದಲಾವಣೆ ಆಗುತ್ತಿದೆ. ಯಾರಿಗೂ ತನ್ನ ಸ್ಥಾನದ ಬಗ್ಗೆ ಭದ್ರತೆ ಇಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.