’83’ನಲ್ಲಿ ರಣವೀರ್ ಫಸ್ಟ್ ಲುಕ್ ಮೆಚ್ಚಿದ ಕಪಿಲ್ ದೇವ್

0
275

ಬೆಂಗಳೂರು, ಜುಲೈ 10, 2019 (www.justkannada.in): ಕ್ರಿಕೆಟಿಗ ಕಪಿಲ್ ದೇವ್ ಅವರ ಜೀವನ ಕಥೆಯಾಧಾರಿತ ಚಿತ್ರ ’83’ನಲ್ಲಿ ರಣವೀರ್ ಸಿಂಗ್ ಚಿತ್ರದ ಮೊದಲ ಪೋಸ್ಟರ್ ರಿಲೀಸ್ ಆಗಿದೆ.

ರಣವೀರ್‌ ತಮ್ಮ 34ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಆ ಚಿತ್ರದ ಫಸ್ಟ್‌ಲುಕ್‌ ಬಿಡುಗಡೆ ಮಾಡಿದ್ದು, ಇದರಲ್ಲಿ ಅವರು ಕಪಿಲ್‌ ದೇವ್‌ ಪಡಿಯಚ್ಚಿನಂತೆ ಕಾಣುತ್ತಿದ್ದಾರೆ.

ಬಾಲಿವುಡ್‌ ನಟರು ಹಾಗೂ ಕ್ರಿಕೆಟಿಗರು ಫಸ್ಟ್‌ಲುಕ್‌ಗೆ ವಾಹ್‌ ಎಂದು ಉದ್ಗರಿಸಿದ್ದಾರೆ. ರಣವೀರ್‌ ಫಸ್ಟ್‌ಲುಕ್‌ಗೆ ಕಪಿಲ್‌ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

1983ರಲ್ಲಿ ಭಾರತಕ್ಕೆ ವಿಶ್ವಕಪ್ ತಂದುಕೊಟ್ಟ ಕಪಿಲ್ ದೇವ್ ಅವರ ನೇತೃತ್ವದ ಟೀಂ ಇಂಡಿಯಾದ ಕತೆ ಈ ಚಿತ್ರದ್ದು.