ಬೆಂಗಳೂರು, ಆ.೩೦,೨೦೨೫: ರಾಜಧಾನಿ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಕನ್ನಡಿಗನೊಬ್ಬ, ಹೊರ ರಾಜ್ಯಗಳ ಜನರು ಹೆಚ್ಚಾಗುತ್ತಿರುವುದರಿಂದ ತನ್ನ ಸ್ವಂತ ನಗರದಲ್ಲಿ ಅಪರಿಚಿತನಂತೆ ಭಾಸವಾಗುತ್ತಿದೆ ಎಂದು ವಿಷಾಧಿಸಿದ್ದಾರೆ.
“ನಾನು ಬೆಂಗಳೂರಿನವನು, ಆದರೆ ನನ್ನ ಸ್ವಂತ ನಗರದಲ್ಲಿ… ವಿಶೇಷವಾಗಿ ಕೆಲಸದಲ್ಲಿ ಅಪರಿಚಿತನಂತೆ ಭಾಸವಾಗುತ್ತಿದೆ” ಎಂಬ ಶೀರ್ಷಿಕೆಯ ರೆಡ್ಡಿಟ್ ಪೋಸ್ಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಜನಿಸಿದರೂ, ನಾನು ಬೆಳೆದು ಬಂದ ಸಂಸ್ಕೃತಿ , ನೆರೆಹೊರೆ ಸಮೂಹ ಮಸುಕಾಗಲು ಪ್ರಾರಂಭಿಸಿದ್ದಾರೆ. “ನಾನು ಬೆಂಗಳೂರಿನವನು, ಕನ್ನಡಿಗ, ಇಲ್ಲಿ ಹುಟ್ಟಿ ಬೆಳೆದಿದ್ದೇನೆ, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದೇನೆ, ಆದರೆ ನನ್ನ ಸ್ವಂತ ನಗರದಲ್ಲಿ ನಾನು ಹೊರಗಿನವನಂತೆ ಭಾಸವಾಗುತ್ತಿದ್ದೇನೆ” ಎಂದು ವಿಷಾಧದ ನುಡಿಗಳನ್ನಾಡಿದ್ದಾರೆ.
ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳುತ್ತಾ, ಬೆಂಗಳೂರು ನಗರ ನನ್ನ ಸ್ವಂತ ಮನೆಯಂತೆ ಭಾಸವಾಗುವುದನ್ನು ನಿಲ್ಲಿಸಿದೆ. ಪರ ರಾಜ್ಯದವರು ಬೆಂಗಳೂರಿಗೆ ಬಂದು ತಮ್ಮದೇ ಆದ ಸ್ವಂತ ಸಮುದಾಯಗಳನ್ನು ರಚಿಸಿಕೊಂಡಿದ್ದಾರೆ. “ಪರ ರಾಜ್ಯಗಳ ಜನರ ಈ ನಡೆ ಯಾವುದೇ ಅಪರಾಧವಲ್ಲ. ನೀವು ಬೆಂಗಳೂರನ್ನು ನಿಮ್ಮ ಮನೆಯನ್ನಾಗಿ ಮಾಡಿಕೊಂಡಿರುವುದು ಸಂತೋಷವಾಗಿದೆ. ಆದರೆ ದಾರಿಯುದ್ದಕ್ಕೂ ಎಲ್ಲೋ, ಬೆಂಗಳೂರು ನನಗೆ ನನ್ನ ಮನೆಯಂತೆ ಭಾಸವಾಗುತ್ತಿಲ್ಲ ” ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ತಾನು ಕೆಲಸ ಮಾಡುವ ಕಚೇರಿಯ ಉದಾಹರಣೆ ಉಲ್ಲೇಖಿಸಿ, “ನನ್ನ ತಂಡದಲ್ಲಿರುವ ಏಕೈಕ ದಕ್ಷಿಣ ಭಾರತೀಯ ನಾನೇ, ಮತ್ತು ನನ್ನ ಮಹಡಿಯಲ್ಲಿರುವ 400 ಜನರಲ್ಲಿ, ನನಗೆ ಇನ್ನೊಬ್ಬ ಬೆಂಗಳೂರಿಗ ಸಿಗುತ್ತಿಲ್ಲ. ನನ್ನ ಸುತ್ತಲಿನ ಸಂಭಾಷಣೆಗಳು ಹಿಂದಿಯಲ್ಲಿ ಮಾತ್ರ.. ನಾನು ಬೆಳೆದ ಸಂಸ್ಕೃತಿ ಮರೆಯಾಗುತ್ತಿರುವಂತೆ ಭಾಸವಾಗುತ್ತಿದೆ. ಇದು ನನಗೆ ವಿಚಿತ್ರವಾದ ಶೂನ್ಯತೆ ಉಂಟುಮಾಡುತ್ತದೆ” ಎಂದು ಬರೆದುಕೊಂಡಿದ್ದಾರೆ.
ಪೋಸ್ಟ್ ವೈರಲ್ ಆಗುತ್ತಿದ್ದಂತೆ, ರೆಡ್ಡಿಟ್‌ನಲ್ಲಿರುವ ಹೆಚ್ಚಿನ ಬಳಕೆದಾರರು, ಈ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿ ತಾವು ಸಹ ಅದೇ ರೀತಿ ಭಾವಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
key words: Kannadiga, Unfamiliar, cultural change, Bangalore,
SUMMARY:
‘I am Kannadigas but…’: ‘Unfamiliar’ in our own village due to cultural change..!
A Kannadiga, born and raised in the capital city of Bengaluru, laments that he feels like a stranger in his own city due to the increasing influx of people from other states. “I’m from Bengaluru, but I feel like a stranger in my own city… especially at work,” he wrote in a Reddit post.