ಕನ್ನಡ ಯುವ ನಿರ್ದೇಶಕ ಭರತ್ ನಿಧನ

ಬೆಂಗಳೂರು,ಡಿಸೆಂಬರ್,25,2020(www.justkannada.in) : ರೋರಿಂಗ್​ ಸ್ಟಾರ್​ ಶ್ರೀಮುರುಳಿ ನಟನೆಯ ಕಂಠಿ ಸಿನಿಮಾ ನಿರ್ದೇಶಕ ಭರತ್ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.Teachers,solve,problems,Government,bound,Minister,R.Ashokಕನ್ನಡ ಚಿತ್ರರಂಗ ಯುವ ನಿರ್ದೇಶಕನನ್ನು ಕಳೆದುಕೊಂಡಂತಾಗಿದೆ. ಬಹು ದಿನಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ನಿರ್ದೇಶಕ ಭರತ್​ ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಡಿ.24ರ ರಾತ್ರಿ 11ಗಂಟೆಗೆ ಮೃತಪಟ್ಟಿದ್ದಾರೆ.

Kannada-director-Bharat-passes-away

ಶ್ರೀಮುರುಳಿ ಅಭಿನಯದ ಕಂಠಿ ಸಿನಿಮಾ ಹಾಗೂ ರವಿಚಂದ್ರನ್​ ಪುತ್ರ ಮನೋರಂಜನ್ ನಟನೆಯ ಸಾಹೇಬ ಚಿತ್ರಕ್ಕೂ‌ ಭರತ್​ ನಿರ್ದೇಶನ ಮಾಡಿದ್ದರು. ಭರತ್​ ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಯುವ ನಿರ್ದೇಶಕನ ಅಕಾಲಿಕ ಮರಣಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.

key words : Kannada-director-Bharat-passes-away