Thursday, August 27, 2026

BDA Apartments

Home Front Page ನಾಡು ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲಾ ಕನ್ನಡ ಸಂಘಟನೆಗಳು ಹೋರಾಟ ನಡೆಸಿವೆ- ಡಿಸಿಎಂ ಅಶ್ವಥ್ ನಾರಾಯಣ್…

ನಾಡು ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲಾ ಕನ್ನಡ ಸಂಘಟನೆಗಳು ಹೋರಾಟ ನಡೆಸಿವೆ- ಡಿಸಿಎಂ ಅಶ್ವಥ್ ನಾರಾಯಣ್…

ಬೆಂಗಳೂರು,ಜನವರಿ,28,2021(www.justkannada.in):  ನೆಲ, ಜಲ, ಭಾಷೆಯ ಬಗ್ಗೆ ಬದ್ಧತೆ ಇಟ್ಟುಕೊಂಡು ಹೋರಾಟ ನಡೆಸುತ್ತಿರುವ ಕನ್ನಡಪರ ಸಂಘಟನೆಗಳ ಕೆಲಸವು ಶ್ಲಾಘನಾರ್ಹ.  ನಾಡು ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲ ಈ ಸಂಘಟನೆಗಳು ಹೋರಾಟ ನಡೆಸಿವೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಶ್ಲಾಘಿಸಿದರು.jk

ಬೆಂಗಳೂರಿನಲ್ಲಿ ಗುರುವಾರ ʼಕರುನಾಡ ವಿಜಯಸೇನೆʼ ಸಂಘಟನೆಯನ್ನು ಉದ್ಘಾಟಿಸಿ ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್, ಹೊಸ ತಲೆಮಾರಿನ ಕ್ರಿಯಾಶೀಲ ಯುವಕರೂ ಕನ್ನಡ ಸೇವೆಯಲ್ಲಿ ತೊಡಗಿರುವುದು ಸಂತಸದ ಸಂಗತಿ. ಇಂಥ ಸಂಘಟನೆಗಳಿಗೆ ಎಲ್ಲರೂ ಬೆಂಬಲ ನೀಡಬೇಕಾಗಿದೆ ಎಂದು ಹೇಳಿದರು.

ಕನ್ನಡ ಹೋರಾಟದ ದಾರಿಯಲ್ಲಿ ಈಗ ʼಕರುನಾಡ ವಿಜಯಸೇನೆʼ ಸಂಘಟನೆಯೂ ಸೇರಿದೆ. ʼಕನ್ನಡಿಗನೇ ಯಜಮಾನʼ ಎಂಬ ಅಡಿಬರಹವನ್ನು ಸಂಘಟನೆ ಹೊಂದಿರುವುದು ಗಮನಾರ್ಹ. ಈ ಸಂಘಟನೆ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿ. ನನ್ನ ಕಡೆಯಿಂದ ಎಲ್ಲ ರೀತಿಯ ಸಹಕಾರ-ಬೆಂಬಲ ಇರುತ್ತದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಭರವಸೆ ನೀಡಿದರು.Kannada organizations – work- Appreciation-DCM -Ashwath Narayan.

ಈ ಸಂದರ್ಭದಲ್ಲಿ ನೂತನ ಸಂಘಟನೆಯ ಅಧ್ಯಕ್ಷ ದೀಪಕ್‌ ಹಾಗೂ ಸಂಘಟನೆಯ ಕೆಲವಾರು ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.

Key words: Kannada organizations – work- Appreciation-DCM -Ashwath Narayan.