ಎಂಇಎಸ್, ಶಿವಸೇನೆ ಕೃತ್ಯ ಖಂಡಿಸಿ ಕನ್ನಡಪರ ಸಂಘಟನೆಗಳಿಂದ ಇಂದು ‘ಬೆಳಗಾವಿ ಚಲೋ’: ಬಿಗಿಪೊಲೀಸ್ ಭದ್ರತೆ .

ಬೆಳಗಾವಿ,ಡಿಸೆಂಬರ್,2021(www.justkannada.in): ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ವಿರೂಪಗೊಳಿಸಿದ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಮತ್ತು ಮಹಾರಾಷ್ಟ್ರದಲ್ಲಿ ಕನ್ನಡ ಬಾವುಟ ಸುಟ್ಟು ವಿಕೃತಿ ಮೆರೆದ ಶಿವಸೇನೆ ಕಾರ್ಯಕರ್ತರ ಕೃತ್ಯವನ್ನ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು ಇಂದು ಬೆಳಗಾವಿ ಚಲೋ ಮೂಲಕ ಪ್ರತಿಭಟನೆ ನಡೆಸಲಿದ್ದಾರೆ.

ಎಂಇಎಸ್ ಶಿವಸೇನೆ ಕೃತ್ಯವನ್ನ ಖಂಡಿಸಿ ಇನ್ನು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಕರೆ ನೀಡಲಾಗಿದೆ. ಕರವೇ ರಾಜ್ಯಾಧ್ಯಕ್ಷ  ನಾರಾಯಣ ಗೌಡ ಬಣ ಹಾಗೂ ಕರವೇ  ಪ್ರವೀಣ್ ಶೆಟ್ಟಿ ಬಣ ಇಂದು ಹಿರೇಬಾಗೇವಾಡಿಯಿಂದ ಸುವರ್ಣ ಸೌಧದವರೆಗೆ ಪಾದಯಾತ್ರೆ ನಡೆಸಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಿ ಧರಣಿ ನಡೆಸಲಿದ್ದಾರೆ.

ಇಂದು ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ ಹಿನ್ನೆಲೆ ಬೆಳಗಾವಿ ನಗರದಾದ್ಯಂತ ಪೊಲೀಸರು ಹೈಅಲರ್ಟ್ ಆಗಿದ್ದು, ಹಿರೇಬಾಗೇವಾಡಿ ಬಳಿ ಬಿಗಿ ಪೊಲೀಸ್ ಭಧ್ರತೆ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಭದ್ರತೆಗಾಗಿ ಇಬ್ಬರು ಎಸಿಪಿ, ಐವರು ಇನ್ಸ್ ಪೆಕ್ಟರ್ಸ್,  ಎರಡು ಕೆಎಸ್ ಆರ್ ಪಿ ತುಕಡಿ, 100ಕ್ಕೂ ಹೆಚ್ಚು ಪೊಲೀಸರನ್ನ ನಿಯೋಜನೆ  ಮಾಡಲಾಗಿದೆ. ಹಿರೇಬಾಗೇವಾಡಿ ಟೋಲ್ ಗೇಟ್ ಬಳಿಯೇ ರ್ಯಾಲಿ ತಡೆಯಲು ಪೊಲೀಸರು ಸಜ್ಜಾಗಿದ್ದಾರೆ.

Key words: kannada organization-protest-belagavi chalo- against-MES-Shivasena