ಥಿಯೇಟರ್’ನಲ್ಲಿ ಮತ್ತೆ ಟಗರು ನೋಡುವ ಅವಕಾಶ!

ಬೆಂಗಳೂರು, ಸೆಪ್ಟೆಂಬರ್ 02, 2021 (www.justkannada.in): ಶಿವರಾಜ್‌ಕುಮಾರ್‌ ಅಭಿನಯದ ಟಗರು ಚಿತ್ರ ಮತ್ತೆ ರಿಲೀಸ್ ಆಗುತ್ತಿದೆ.

ಹೌದು. ಶಿವರಾಜ್‌ಕುಮಾರ್‌ ಅಭಿನಯದ ಟಗರು ಚಿತ್ರವನ್ನು ಮತ್ತೆ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಎಲ್ಲರಿಗೂ ಗೊತ್ತಿರುವಂತೆ ‘ಕಡ್ಡಿಪುಡಿ’  ಬಳಿಕ ಶಿವರಾಜ್ ಕುಮಾರ್‌-ನಿದೇರ್ಶಕ ದುನಿಯಾ ಸೂರಿ ಮಾಡಿದ ಮ್ಯಾಜಿಕ್ ‘ಟಗರು’ ಚಿತ್ರ.

ಮೂರೂವರೆ ವರ್ಷಗಳಾದ ಬಳಿಕವೂ ಚಿತ್ರ ಸಾಕಷ್ಟು ಹವಾ ಇಟ್ಟಿದೆ. ಧನಂಜಯ್‌, ವಸಿಷ್ಠ ಎನ್ ಸಿಂಹ, ಮನ್ವಿತಾ ಕಾಮತ್‌ ಹಾಗೂ ಭಾವನಾ ನಟನೆ ಎಲ್ಲರನ್ನೂ ಸೆಳೆದಿತ್ತು.