Tuesday, October 6, 2026

BDA Apartments

immense respect BDA JK_Adv BDA Adv
Home Cinema ಕುರುಕ್ಷೇತ್ರ ಚಿತ್ರದ ಡಬ್ಬಿಂಗ್ ಹಕ್ಕುದಾಖಲೆ ಮೊತ್ತಕ್ಕೆ ಮಾರಾಟ

ಕುರುಕ್ಷೇತ್ರ ಚಿತ್ರದ ಡಬ್ಬಿಂಗ್ ಹಕ್ಕುದಾಖಲೆ ಮೊತ್ತಕ್ಕೆ ಮಾರಾಟ

ಬೆಂಗಳೂರು, ಮೇ 20, 2019 (www.justkannada.in): ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕುರುಕ್ಷೇತ್ರ’ ವರಮಹಾಲಕ್ಷ್ಮಿ ಹಬ್ಬದ ದಿನ ಬಿಡುಗಡೆಯಾಗಲಿದೆ.

ಮುನಿರತ್ನ ನಿರ್ಮಾಣದಲ್ಲಿ, ನಾಗಣ್ಣ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಕುರುಕ್ಷೇತ್ರ’ ಚಿತ್ರದಲ್ಲಿ ಘಟಾನುಘಟಿ ಕಲಾವಿದರು ಅಭಿನಯಿಸಿದ್ದಾರೆ.

ಹೈ ಬಜೆಟ್ ನಲ್ಲಿ ‘ಕುರುಕ್ಷೇತ್ರ’ ನಿರ್ಮಾಣವಾಗಿದ್ದು, ಬಿಡುಗಡೆಗೂ ಮೊದಲೇ ದಾಖಲೆ ಬರೆದಿದೆ. ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸ್ 9.50 ಕೋಟಿ ರೂ.ಗೆ ಮಾರಾಟವಾಗಿದೆ.

ಕನ್ನಡ ಅವತರಣಿಕೆಯ ಸ್ಯಾಟಲೈಟ್ ಹಕ್ಕುಗಳು 9 ಕೋಟಿ ರೂ.ಗೆ ಮಾರಾಟವಾಗಿದೆ ಎನ್ನಲಾಗಿದೆ. ಬಹು ಭಾಷೆಗಳಲ್ಲಿ ‘ಕುರುಕ್ಷೇತ್ರ’ ಬಿಡುಗಡೆಯಾಗಲಿದೆ.