ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದ ‘ಅವನೇ ಶ್ರೀಮನ್ನಾರಾಯಣ’ ಫಸ್ಟ್​ ಲುಕ್

ಮೈಸೂರು, ನವೆಂಬರ್, 24, 2019 (www.justkannada.in): ಬಹುನಿರೀಕ್ಷಿತ ಚಿತ್ರ ಅವನೇ ಶ್ರೀಮನ್ನಾರಾಯಣ ಫಸ್ಟ್​ ಲುಕ್​ ರಿಲೀಸ್​ ಆಗಿದ್ದು, ರಕ್ಷಿತ್​ ಶೆಟ್ಟಿ ಮೊದಲ ನೋಟ ನಿರೀಕ್ಷೆ ಹುಟ್ಟಿಸಿದೆ.

ಅವನೇ ಶ್ರೀಮನ್ನಾರಾಯಣ ಫಸ್ಟ್​ ಲುಕ್​ ಬಿಡುಗಡೆ, ಗುಂಡು ಹಾರಿಸುತ್ತಾ ಬುಲೆಟ್​ ಮೇಲೆ ಕುಳಿತು ಪೋಸ್​ ನೀಡಿದ ರಕ್ಷಿತ್​ ಶೆಟ್ಟಿ ಎಲ್ಲರ ಗಮನ ಸೆಳೆಯುತ್ತಿದೆ. ಈ ಮೂಲಕ ರಕ್ಷಿತ್​ ಶೆಟ್ಟಿಯ ಅವನೇ ಶ್ರೀಮನ್ನಾರಾಯಣ ಫಸ್ಟ್​ ಲುಕ್​ ರಿವೀಲ್​ ಆಗಿದೆ.

ಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿರುವ ರಕ್ಷಿತ್​ ರ ಬಹುನಿರೀಕ್ಷಿತ ಶ್ರೀಮನ್ನಾರಾಯಣ ಚಿತ್ರವು ದಿನ ದಿನಕ್ಕೂ ಕುತೂಹಲ ಹೆಚ್ಚಿಸುತ್ತಿದೆ.
ಟೀಸರ್​ ಮೂಲಕ ಗಮನ ಸೆಳೆದಿರುವ ಸಿಂಪಲ್ ಸ್ಟಾರ್​ ರಕ್ಷಿತ್​ ಶೆಟ್ಟಿ ಅಭಿನಯದ ಚಿತ್ರ ಅವನೇ ಶ್ರೀಮನ್ನಾರಾಯಣ ಫಸ್ಟ್​ ಲುಕ್​ ಶನಿವಾರ ಸಂಜೆ ಬಿಡುಗಡೆಯಾಗಿದೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಫಸ್ಟ್​ ಲುಕ್​ ನಲ್ಲಿ ಏನಿದೆ?
ಶ್ರೀಮನ್ನಾರಾಯಣ ಫಸ್ಟ್​ ಲುಕ್​ ನಲ್ಲಿ ರಕ್ಷಿತ್​ ಪೋಲಿಸ್​ ಅವತಾರದಲ್ಲಿ ಬುಲೆಟ್​ ಗಾಡಿಯ ಮೇಲೆ ಕುಳಿತು ಪಿಸ್ತೂಲಿನಲ್ಲಿ ಗುಂಡು ಹಾರಿಸುವ ಪೋಸ್​ ನಲ್ಲಿ ಕಾಣಿಸಿಕೊಂಡಿದ್ದಾರೆ. ರಕ್ಷಿತ್​ ರ ಹಿಂದೆ ನಾಲ್ಕು ಜನ ಕುದುರೆಯಲ್ಲಿ ಹಿಂಬಾಲಿಸುತ್ತಿರುವುದನ್ನೂ ಕಾಣಬಹುದು. ಈ ಮೂಲಕ ರಕ್ಷಿತ್​ ಚಿತ್ರದಲ್ಲಿ ಒಬ್ಬ ಪೋಲಿಸ್​ ಅಧಿಕಾರಿಯಾಗಿ ಕಾಣಿಸುತ್ತಿದ್ದಾರೆ ಎಂಬುದು ಖಚಿತವಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿದ್ದ ಟೀಸರ್​ ಸಹ ಇದನ್ನು ಹೇಳಿತ್ತು. ಅಲ್ಲದೆ ಪೋಸ್ಟರ್​ ನಲ್ಲಿ ಶ್ರೀಮನ್ನಾರಾಯಣದ ಟ್ರೈಲರ್​ ಇದೇ ತಿಂಗಳ 28 ರಂದು ಬಿಡುಗಡೆಯಾಗಲಿದೆ ಎಂಬುದನ್ನು ತಿಳಿಸಿದೆ.

ನಟ ರಕ್ಷಿತ್​ ಈ ಹಿಂದೆ ನ.11 ರಂದು ಶ್ರೀಮನ್ನಾರಾಯಣ ಚಿತ್ರದ ಟ್ರೈಲರ್​ ಆದಷ್ಟು ಬೇಗ ಪ್ರೇಕ್ಷಕರ ಮುಂದೆ ಬರಲಿದೆ ಎಂದು ಹೇಳಿದ್ದರು.
“ಶ್ರೀಮನ್ನಾರಾಯಣದ ಸಂಕಲನಗೊಂಡ ಮೊದಲ ಟ್ರೈಲರ್​ ಬಿಡುಗಡೆಯಾಗಲು ಸಜ್ಜಾಗಿದ್ದು ಅಭಿಮಾನಿಗಳ ಕಾತರವನ್ನು ಹೆಚ್ಚಿಸಲಿದೆ. ಟ್ರೈಲರ್​ ಬಿಡುಗಡೆಯಾದಾಗ ಎಲ್ಲ ಅಭಿಮಾನಿಗಳ ಪ್ರತಿಕ್ರಿಯೆಯನ್ನು ನೋಡಲು ನಾನು ಕಾಯುತ್ತಿದ್ದೇನೆ,” ಎಂದು ತಮ್ಮ ಟ್ವಿಟರ್​ ನಲ್ಲಿ ಬರೆದುಕೊಂಡಿದ್ದರು.
ಪ್ರಾರಂಭವಾದಾಗಿನಿಂದ ರಕ್ಷಿತ್ ಮತ್ತು ಶಾನ್ವಿ ಶ್ರೀವಾಸ್ತವ್​ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶ್ರೀಮನ್ನಾರಾಯಣ ಚಿತ್ರ ಕುತೂಹಲ ಮೂಡಿಸುತ್ತಿದೆ. ರಕ್ಷಿತ್​ ಇದರಲ್ಲಿ ಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಶಾನ್ವಿ ಮೊದಲನೆಯ ಬಾರಿಗೆ ಕನ್ನಡ ಚಿತ್ರಕ್ಕಾಗಿ ಕಂಠ ನೀಡಿದ್ದಾರೆ. ಕನ್ನಡದಲ್ಲಿ ಡಬ್ ಮಾಡುತ್ತಿದ್ದೇನೆ ಎಂದು ಆಡಿಯೋ ಕ್ಲಿಪ್ ಒಂದನ್ನು ಬಿಡುಗಡೆ ಮಾಡಿದ್ದರು. ಚಿತ್ರಕ್ಕೆ ಧನ್ಯವಾದ ಸಲ್ಲಿಸಿ ಕನ್ನಡಿಗರಿಗೆ ಒಂದು ಪತ್ರವನ್ನೂ ಬರೆದಿದ್ದರು.
ಶ್ರೀಮನ್ನಾರಾಯಣ ಚಿತ್ರವು ವಷಾಂತ್ಯದಲ್ಲಿ ಅಂದರೆ ಡಿಸೆಂಬರ್​ 27 ರಂದು ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳಲ್ಲಿ ಬೆಳ್ಳಿ ತೆರೆಗೆ ಅಪ್ಪಳಿಲಿದೆ. ಈ ಮಾಹಿತಿಯನ್ನು ಸ್ವತಃ ರಕ್ಷಿತ್​ ಅವರು ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದರು.