ಕೊರೊನಾ ಕಾಲದ ಯಶಸ್ವಿ ಚಿತ್ರ: 50 ದಿನ ಪೂರೈಸಿದ ‘ಆಕ್ಟ್ 1978’

ಬೆಂಗಳೂರು, ಜನವರಿ 09, 2021 (www.justkannada.in): 

‘ಆಕ್ಟ್ 1978’ ಸಿನಿಮಾ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದೆ.

ನವೆಂಬರ್ 20ರಂದು ರಾಜ್ಯಾದ್ಯಂತ ರಿಲೀಸ್ ಆಗಿದ್ದ ಸಿನಿಮಾ ಕೊರೊನಾ ಸಂಕಷ್ಟದ ನಡುವೆಯೂ ಸಾಕಷ್ಟು ಜನರನ್ನು ಥಿಯೇಟರ್ ಗೆ ಸೆಳೆದಿತ್ತು.

ಮಂಸೋರೆ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿತ್ತು. ಪ್ರೇಕ್ಷಕರಿಂದ ಈ ಸಿನಿಮಾ ಬಗ್ಗೆ ಉತ್ತಮ ಪ್ರತಿಕ್ರಿಯೆಗಳು ದೊರೆತಿದ್ದವು.

ಇದೀಗ 50 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಈ ಸಂತೋಷವನ್ನು ನಿರ್ದೇಶಕ ಮಂಸೋರೆ ತಮ್ಮ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ.

‘ಆಕ್ಟ್ 1978′ ಸಿನಿಮಾ 50 ದಿನಗಳ ಮೈಲಿಗಲ್ಲು ತಲುಪಿಸಿದ ಪ್ರತಿಯೊಬ್ಬ ಪ್ರೇಕ್ಷಕ ಪ್ರಭುವಿಗೂ ಹಾಗೂ ಪ್ರದರ್ಶಕರಿಗೂ ತುಂಬು ಹೃದಯದ ಧನ್ಯವಾದಗಳು’ ಎಂದು ಚಿತ್ರದ ನಿರ್ದೇಶಕ ಮಂಸೂರೆ ಬರೆದುಕೊಂಡಿದ್ದಾರೆ.