‘ ಕನ್ನಡದ ಕೋಟ್ಯಧಿಪತಿ’ ಮಾಸಾಂತ್ಯಕ್ಕೆ ತೆರೆ : ಕೊನೆ ಸಂಚಿಕೆಯಲ್ಲಿ ಪುನೀತ್- ರಚಿತ ಮೋಡಿ..

 

ಬೆಂಗಳೂರು, ಅ.16, 2019 : (www.justkannada.in news ) ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ, ನಟ ಪವರ್ ಸ್ಟಾರ್ ಪುನೀತ್ ನಿರೂಪಣೆಯ ‘ ಕನ್ನಡದ ಕೋಟ್ಯಧಿಪತಿ’ ಗೆ ಸದ್ಯದಲ್ಲೇ ತೆರೆ ಬೀಳಲಿದೆ. ಕೊನೆಯ ಸಂಚಿಕೆಯಲ್ಲಿ ನಟಿ ರಚಿತಾ ರಾಮ್ ಭಾಗಿಯಾಗುತ್ತಿದ್ದಾರೆ ಎನ್ನಲಾಗಿದೆ.

ಜೂನ್ ತಿಂಗಳಿನಲ್ಲಿ ಪ್ರಾರಂಭವಾದ ಈ ಕಾರ್ಯಕ್ರಮ ಸದ್ಯದಲ್ಲೇ ಮುಕ್ತಾಯವಾಗಲಿದೆ. ಕೋಟ್ಯಧಿಪತಿಯ ಕೊನೆಯ ಎಪಿಸೋಡ್ ಮುಂದಿನ ವಾರ ಅಥವಾ ಮಾಸಾಂತ್ಯಕ್ಕೆ ಪ್ರಸಾರವಾಗುವ ಸಾಧ್ಯತೆ ಇದೆ. ಅಲ್ಲಿಗೆ ಕನ್ನಡದ ಕೋಟ್ಯಧಿಪತಿ ಸೀಸನ್ 4 ತೆರೆ ಬೀಳಲಿದೆ.

ಎಲ್ಲವೂ ಅಂದುಕೊಂಡತೆ ನಡೆದಿದ್ದರೆ ಕನ್ನಡ ಕೋಟ್ಯಾಧಿಪತಿ ಕೊನೆಯ ಸಂಚಿಕೆಗೆ ಕೋಟಿಗೊಬ್ಬನೇ (ನಟ ಸುದೀಪ್ ) ಬರಬೇಕಿತ್ತು. ಆದರೆ ಕೋಟಿಗೊಬ್ಬ-3 ಶೂಟಿಂಗ್ ಗಾಗಿ ಸುದೀಪ್ ವಿದೇಶಕ್ಕೆ ತೆರಳಿರುವ ಕಾರಣ ನಟಿ ರಚಿತಾ ರಾಮ್ ಗೆಸ್ಟ್ ಆಗಿ ಬಂದಿದ್ದಾರೆ ಎನ್ನಲಾಗಿದೆ. ಈಗಾಗಲೇ ರಚಿತಾ ಹಾಗೂ ಪುನೀತ್ ಚಿತ್ರೀಕರಣದಲ್ಲಿ ಭಾಗವಹಿಸಿರುವ ಫೋಟೋಗಳು, ಡ್ಯಾನ್ಸ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿವೆ. ನಟಿ ರಚಿತಾ ರಾಮ್ ಹಾಟ್ ಸೀಟ್ ನಲ್ಲಿ ಪುನೀತ್ ರನ್ನು ಕೂರಿಸಿ ತಾವೇ ಪ್ರಶ್ನೆಗಳನ್ನು ಕೇಳಿರುವುದು ಸಂಚಿಕೆಯ ವಿಶೇಷತೆ. ಜತೆಗೆ ಈ ಜೋಡಿ, ಅಭಿಮಾನಿಗಳ ಒತ್ತಾಯದ ಮೇರೆಗೆ ವೇದಿಕೆಯಲ್ಲಿ ಡ್ಯಾನ್ಸ್ ಮಾಡಿರುವುದು ಮತ್ತೊಂದು ವಿಶೇಷ.

 

key words : kannada-kotyadhipathi-quiz-puneeth-rachitha-ram-final