ಸಿದ್ದಗಂಗ ಮಠಕ್ಕೆ ಭೇಟಿ ನೀಡಿದ ಸ್ಯಾಂಡಲ್ ವುಡ್ ‘ ಭಜರಂಗಿ ‘..

 

ಬೆಂಗಳೂರು, ಜ.19, 2020 (www.justkannada.in news) : ತುಮಕೂರಿನ ಸಿದ್ಧಗಂಗ ಮಠಕ್ಕೆ ಹ್ಯಾಟ್ರಿಕ ಹೀರೊ ಶಿವರಾಜ್ ಕುಮಾರ್ ಭೇಟಿ ನೀಡಿ, ನಡೆದಾಡುವ ದೇವರು ಎಂದೇ ಜನಮಾನಸದಲ್ಲಿ ನೆಲೆಸಿರುವ ಸಿದ್ದಗಂಗ ಶ್ರೀಗಳ ಗದ್ದುಗೆಗೆ ದರ್ಶನ ಪಡೆದರು.

ನಟ ಶಿವರಾಜ್ ಕುಮಾರ್ ಹಾಗೂ ಸಿದ್ದಗಂಗ ಮಠಕ್ಕೂ ಅವಿನಾಭಾವ ಸಂಬಂಧ. ಸಿದ್ದಗಂಗ ಶ್ರೀಗಳ ಪರಮ ಭಕ್ತದಾರ ಶಿವಣ್ಣ, ಈ ಇಂದೆ ಶ್ರೀಗಳ ದರ್ಶನಕ್ಕಾಗಿ ಹಲವಾರು ಭಾರಿ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಜನಪ್ರಿಯ ಸಿನಿಮಾ ‘ಟಗರು’ ಚಿತ್ರದ ಶೂಟಿಂಗ್ ಸಹ ಶ್ರೀಗಳ ಆರ್ಶೀವಾದ ಪಡೆದು ಮಠದ ಆವರಣದಲ್ಲಿ ಚಿತ್ರೀಕರಿಸಿದ್ದರು.

kannada-hatric-hero-shivarajkumar-siddaga

ನಡೆದಾಡುವ ದೇವರು, ಸಿದ್ದಗಂಗ ಶ್ರೀ ನಿಧನವಾಗಿ ಒಂದು ವರ್ಷ ಕಳೆದ ಹಿನ್ನಲೆಯಲ್ಲಿ ಮಠಕ್ಕೆ ಆಗಮಿಸಿದ್ದ ನಟ ಶಿವಣ್ಣ, ಕಿರಿಯ ಶ್ರೀಗಳನ್ನು ಕಂಡು ಆರ್ಶೀವಾದ ಪಡೆದರು. ಜತೆಗೆ ಇದೇ ವೇಳೆ ಸಿದ್ದಗಂಗ ಶ್ರೀಗಳು ಲಿಂಗೈಕ್ಯರಾದ ಸಮಾಧಿ ಸ್ಥಳಕ್ಕೆ ತೆರಳಿ ಗದ್ದುಗೆಯ ದರ್ಶನ ಪಡೆದರು. ಅಲ್ಲೇ ಕೆಲ ಕಾಲ ಧ್ಯಾನಾಸಕ್ತರಾಗಿದ್ದರು.

ಸಿದ್ದಗಂಗ ಮಠಕ್ಕೆ ಹ್ಯಾಟ್ರಿಕ್ ಹೀರೊ ಆಗಮಿಸಿದ ವಿಷಯ ತಿಳಿದು ಮಠದಲ್ಲಿನ ನೂರಾರು ವಿದ್ಯಾರ್ಥಿಗಳು, ಮಠದ ಭಕ್ತರು ನೆಚ್ಚಿನ ನಟನನ್ನು ನೋಡಲು ಜಮಾಯಿಸಿದರು. ಶ್ರೀಗಳ ದರ್ಶನ ಹಾಗೂ ಆರ್ಶೀವಾದದ ನಂತರ ನಟ ಶಿವಣ್ಣ, ಮಠದ ಆವರಣದಲ್ಲಿ ಜಮಾಯಿಸಿದ್ದ ಅಭಿಮಾನಿಗಳತ್ತ ತೆರಳಿ ಅವರಿಗೆ ಕೈಬೀಸಿದರು.

ನಟ ಶಿವಣ್ಣ ಅಭಿನಯದ ಭಜರಂಗಿ-2 ಸಿನಿಮಾದ ಚಿತ್ರೀಕರಣ ಬೆಂಗಳೂರು ಸುತ್ತಮುತ್ತ ನಡೆಯುತ್ತಿದೆ. ಕೆಲ ದಿನಗಳ ಹಿಂದೆಯಷ್ಟೆ ಚಿತ್ರೀಕರಣದ ಸೆಟ್ ನಲ್ಲಿ ಬೆಂಕಿ ಅಕಸ್ಮಿಕ ಸಂಭವಿಸಿತ್ತು. ಆದರೆ ಅದೃಷ್ಠವಶಾತ್, ಘಟನೆಯಲ್ಲಿ ಯಾರಿಯೂ ಯಾವುದೇ ಅಪಾಯವಾಗಿರಲಿಲ್ಲ.

key words : kannada-hatric-hero-shivarajkumar-siddaga