ಕರ್ನಾಟಕದಲ್ಲಿ ಕನ್ನಡದಲ್ಲೆ ಮಾತನಾಡುತ್ತೇವೆಂದು ಎಲ್ಲರೂ ಶಪಥ ಮಾಡಬೇಕು- ಸಿಎಂ ಸಿದ್ದರಾಮಯ್ಯ

ಮೈಸೂರು,ನವೆಂಬರ್,21,2025 (www.justkannada.in): ಎಲ್ಲಾರೂ ಕೂಡ ಅವಕಾಶ ಸಿಕ್ಕಾಗ ಸಮಾಜದ ಋಣ ತೀರಿಸುವ ಕೆಲಸವನ್ನು ಮಾಡಬೇಕು. ಅದರಲ್ಲೂ ಹಾಸ್ಟೆಲ್ ವಿದ್ಯಾರ್ಥಿಗಳು ಸಮಾಜದ ಋಣ ತೀರಿಸಲೇಬೇಕು. ಕರ್ನಾಟಕದಲ್ಲಿ ಕನ್ನಡದಲ್ಲೆ ಮಾತನಾಡುತ್ತೇನೆ ಅಂತ ಎಲ್ಲರೂ ಶಪಥ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಕನ್ನಡ ರಾಜ್ಯೋತ್ಸವ 2025, ದೇವರಾಜ ಅರಸು  ಎಲ್.ಜಿ ಹಾವನೂರು ಪ್ರಶಸ್ತಿ ಸಮಾರಂಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಸಿದ್ದರಾಮಯ್ಯ ಅವರ ಕಾರಿನ ಮೇಲೆ ಕಾಗೆ  ಕುಳಿತಿದ್ದಕ್ಕೆ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುತ್ತಾರೆ ಅಂತ ಪುರೋಹಿತ ಹೇಳಿದರು. ಬಜೆಟ್ ಮಂಡನೆ ಮಾಡಲ್ಲ ಅಂತ ಟಿ.ವಿ ಚಾನಲ್ ನಲ್ಲಿ ಕುಳಿತು ಪುರೋಹಿತ ಹೇಳಿದ್ರು. ಹೇಳಿದ ಮೇಲೆ ಬಜೆಟ್ ಮಂಡನೆ  ಮಾಡಿದೆ.  2 ವರ್ಷ ಮುಖ್ಯಮಂತ್ರಿಯು ಆದೆ. ಈಗ ಎರಡುವರೆ ವರ್ಷದಿಂದ ಮುಖ್ಯಮಂತ್ರಿಯಾಗಿದ್ದೇನೆ. ನಮ್ಮ ಮನೆಯವರು ಈ ಅಮಾವಾಸ್ಯೆ ರಾಹುಕಾಲ ಎಲ್ಲಾವನ್ನು ನಂಬುತ್ತಾರೆ

ಕೆಲವು ಜನರನ್ನು ಯಾಕಪ್ಪ ವಿದ್ಯೆ ಇಲ್ಲ , ಊಟ ಇಲ್ಲ ಅಂತ ಕೇಳಿದರೆ ಹಿಂದಿನ ಜನ್ಮದಲ್ಲಿ ಪಾಪ ಮಾಡಿದ್ದೆ ಅಂತ ಹೇಳುತ್ತಾರೆ. ಹಿಂದಿನ ಜನ್ಮನು ಇಲ್ಲ ಯಾವ ಜನ್ಮನೂ ಇಲ್ಲ ಈಗ ಏನು ಮಾಡುತ್ತೀವಿ ಅಷ್ಟೆ. ಕರ್ನಾಟಕದಲ್ಲಿ ಮೂರು ಲಕ್ಷದ 88 ಸಾವಿರ ವಿದ್ಯಾರ್ಥಿಗಳು ಹಾಸ್ಟೆಲ್ ನಲ್ಲಿ ವಿದ್ಯಭ್ಯಾಸ ಮಾಡುತ್ತಿದ್ದಾರೆ. ದಲಿತ ವಿದ್ಯಾರ್ಥಿಗಳಿಗೆ ಹಿಂದುಳಿದ ವಿದ್ಯಾರ್ಥಿಗಳಿಗೆ ನಮ್ಮ ಸರ್ಕಾರ ಯಾವತ್ತು ಸಹಾಯ ಮಾಡುತ್ತೆ. ದೇವರಾಜ್ ಅರಸು ಅವರು ಹಿಂದೂಳಿದ ವರ್ಗದವರಿಗೆ ಶಕ್ತಿ ತುಂಬುವ ಕೆಲಸ ಮಾಡಿದರು. ನಾನು ಈ‌ ಹಿಂದೆ ಅನೇಕ ಭಾಗ್ಯಗಳನ್ನು ನೀಡಿದ್ದೇನೆ. ಯಾಕೆಂದರೆ ಬಡವರಿಗೆ ಶಕ್ತಿ ತುಂಬುವ ಉದ್ದೇಶದಿಂದ ಮಾಡಿದ್ದೇನೆ. ಅಸಮಾನತೆ ಹೋಗದೆ ಇದ್ದರೆ ಜಾತಿ ವ್ಯವಸ್ಥೆ ಹೋಗುವದಿಲ್ಲ. ನಾವು ಸ್ವಾಭಿಮಾನ ಬೆಳಸಿಕೊಳ್ಳಬೇಕೆ ಹೊರತು ಗುಲಾಮಗಿರಿಯನ್ನು ಬೆಳೆಸಿಕೊಳ್ಳಬಾರದು. ಮೇಲ್ಜಾತಿ ಅವರು ಬಡವರಾಗಿದ್ದರೂ ಅವರನ್ನು ಸ್ವಾಮಿ,ಬುದ್ದಿ ಅಂತ ಮಾತನಾಡಿಸುತ್ತೇವೆ. ಒಬ್ಬ ದಲಿತ ಶ್ರೀಮಂತನಾಗಿದ್ದರೂ, ವಿದ್ಯಾವಂತನಾಗಿದರೂ ಅವನ್ನು ಏಕವಚನದಲ್ಲಿ‌ಮಾತನಾಡಿಸುತ್ತಾರೆ ಎಂದರು.

ಸಿಎಂ ಭಾಷಣದ ವೇಳೆ ನೀವೇ 5 ವರ್ಷ ಸಿಎಂ ಅಗಿರಬೇಕು ಎಂದ ಸಭಿಕರೊಬ್ಬರು ಹೇಳಿದರು.  ಅದು ಹೈಕಮಾಂಡ್ ತೀರ್ಮಾನ ಮಾಡುತ್ತೆ ಬಿಡಪ್ಪ ಎಂದು ಸಿದ್ದರಾಮಯ್ಯ ನುಡಿದರು.

ಎಲ್ಲರೂ ಕೂಡ ಅವಕಾಶ ಸಿಕ್ಕಾಗ ಸಮಾಜದ ಋಣ ತೀರಿಸುವ ಕೆಲಸವನ್ನು ಮಾಡಬೇಕು. ಅದರಲ್ಲೂ ಹಾಸ್ಟೆಲ್ ವಿದ್ಯಾರ್ಥಿಗಳು ಸಮಾಜದ ಋಣ ತೀರಿಸಲೇಬೇಕು . ಕರ್ನಾಟಕದಲ್ಲಿ ಕನ್ನಡದಲ್ಲೆ ಮಾತನಾಡುತ್ತೇನೆ ಅಂತ ಎಲ್ಲರೂ ಶಪಥ ಮಾಡಬೇಕು. ಬೆಂಗಳೂರಿಗೆ ಹೋದರೆ ನಾವು ಕರ್ನಾಟಕದಲ್ಲಿ ಇದ್ದಿವೋ ಬೇರೆ ರಾಜ್ಯದಲ್ಲಿದೇವಾ ಅನ್ನೋ ರೀತಿ ಇದೆ. ರಾಜ್ಯದಲ್ಲಿ ಏಕೀಕರಣಕ್ಕೆ ಬಹಳ ಜನ ಹೋರಾಟ ಮಾಡಿದ್ದಾರೆ ಅವರನ್ನು ಸ್ಮರಿಸೋಣ. ನನಗೆ ಈಗ  79 ವರ್ಷ 4 ತಿಂಗಳು ಅಗಿದೆ. ನಾನಂತೂ ನೂರು ವರ್ಷ ಬದುಕುತ್ತೇನೆ. ಅದೇ ರೀತಿ ರವಿವರ್ಮ ಕೂಡ ಹೆಚ್ಚು ವರ್ಷ ಬದುಕಲಿ . ಗಾಂಧೀಜಿಗೆ ಒಬ್ಬರು ಪತ್ರ ಬರೆದಿದ್ದರು, 100 ವರ್ಷ ಬದುಕಿ ಅಂತ ಹೇಳಿದರು. ನಾನು 125 ವರ್ಷ ಬದುಕಬೇಕು ಅಂತಿದ್ದೇನೆ ಅಂತ ಗಾಂಧಿ ಉತ್ತರ ಕೊಟ್ಟಿದ್ದರು. ನಾನು 100 ವರ್ಷ ಬದುಕುತ್ತೇನೆ ಎಂದು ನಗುತ್ತಾ ಸಿಎಂ ಸಿದ್ದರಾಮಯ್ಯ ಭಾಷಣ ಮುಗಿಸಿದರು.

Key words: Everyone, Karnataka, speak, Kannada, CM Siddaramaiah