Thursday, September 17, 2026

BDA Apartments

ಕನ್ನಡದ ಹಿರಿಯ ನಟ, ನಿರ್ದೇಶಕ ದ್ವಾರಕೀಶ್(81) ಇನ್ನಿಲ್ಲ BDA JK_Adv BDA Adv
Home Cinema  ಕನ್ನಡದ ಹಿರಿಯ ನಟ, ನಿರ್ದೇಶಕ ದ್ವಾರಕೀಶ್(81) ಇನ್ನಿಲ್ಲ.

 ಕನ್ನಡದ ಹಿರಿಯ ನಟ, ನಿರ್ದೇಶಕ ದ್ವಾರಕೀಶ್(81) ಇನ್ನಿಲ್ಲ.

ಬೆಂಗಳೂರು,ಏಪ್ರಿಲ್,16,2024 (www.justkannada.in): ಕನ್ನಡದ ಹಿರಿಯ ನಟ, ನಿರ್ದೇಶಕ ದ್ವಾರಕೀಶ್(81) ಇಂದು ನಿಧನರಾಗಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ  ಹಿರಿಯ ನಟ ದ್ವಾರಕೀಶ್  ಬೆಂಗಳೂರಿನ ಎಲೆಕ್ಟ್ರಾನ್ ಸಿಟಿಯ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂಬ ಮಾಹಿತಿ ಕುಟುಂಬಸ್ಥರಿಂದ ತಿಳಿದು ಬಂದಿದೆ.ಕನ್ನಡದ ಹಿರಿಯ ನಟ dwarakish

1942 ಆಗಸ್ಟ್ 19 ರಂದು ಮೈಸೂರು ಜಿಲ್ಲೆ ಹುಣಸೂರಿನಲ್ಲಿ  ನಟ ದ್ವಾರಕೀಶ್ ಜನಿಸಿದ್ದು 1963ರಲ್ಲಿ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದರು.  ನಟ ದ್ವಾರಕೀಶ್ ನಟ ನಿರ್ದೇಶಕ, ನಿರ್ಮಾಪಕರಾಗಿ ಸೇವೆ ಸಲ್ಲಿಸಿದ್ದರು. ವಿಷ್ಣುವರ್ದನ್ ಅಂಬರೀಶ್, ಶ್ರೀನಾಥ್ , ರವಿಚಂದ್ರನ್ ಸೇರಿ ಹಲವು ನಟರ ಜೊತೆ ನಟಿಸಿದ್ದರು.

1966ರಲ್ಲಿ ಡಾ.ರಾಜ್ ಕುಮಾರ್ ನಟನೆಯ ಮೇಯರ್ ಮುತ್ತಣ್ಣ ನಿರ್ಮಿಸಿದ್ದರು.   ನೀ ಬರೆದ ಕಾದಂಬರಿ ಸಿನಿಮಾ ನಿರ್ದೇಶಿಸಿದ್ದರು.  ಹೀಗೆ  ಕನ್ನಡದಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನ ಮಾಡಿದ್ದ ನಟ ದ್ವಾರಕೀಶ್  ಅವರ ಅಭಿನಯದ ಕೊನೆಯ ಚಿತ್ರ ಚೌಕ.

Key words: Kannada actor, Dwarkeesh, no more