ಟೈಲರ್ ಕನ್ಹಯ್ಯಲಾಲ್ ಹಂತಕರ ಮೇಲೆ ಹಲ್ಲೆ..?

ರಾಜಸ್ತಾನ್,ಜುಲೈ,2,2022(www.justkannada.in) ಉದಯಪುರದಲ್ಲಿ  ಟೈಲರ್ ಕನ್ಹಯ್ಯಾ ಲಾಲ್ ಅವರ ಹತ್ಯೆ ಮಾಡಿದ್ಧ ಹಂತಕರ ಮೇಲೆ ಜೈಪುರ ನ್ಯಾಯಾಲಯದ ಹೊರಗೆ ಸೇರಿದ್ದ ಜನರ ಗುಂಪೊಂದು ಹಲ್ಲೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕನ್ಹಯ್ಯ ಲಾಲ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ ಮೊಹಮ್ಮದ್ ರಿಯಾಜ್ ಮತ್ತು ಗೌಸ್ ಮೊಹಮ್ಮದ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಎನ್ ಐಎ ಕೋರ್ಟ್ ಗೆ ಹಾಜರುಪಡಿಸಿತ್ತು. ಈ ಮಧ್ಯೆ ನ್ಯಾಯಾಲಯ  ಆರೋಪಿಗಳನ್ನ ಜುಲೈ 12ರವರೆಗೆ ಎನ್‌ಐಎ ಕಸ್ಟಡಿಯನ್ನು ನೀಡಿದೆ.

ಈ ನಡುವೆ ಇಂದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ  ನಂತರ ಪೊಲೀಸ್ ವ್ಯಾನ್ ಹತ್ತುವ ವೇಳೆ  ಅಲ್ಲಿ ನೆರೆದಿದ್ದ ಜನರ ಗುಂಪೊಂದು ಆರೋಪಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಜೂನ್ 28ರಂದು ಹಾಡುಹಗಲೇ ಆರೋಪಿಗಳು ಹಿಂದೂ  ಟೈಲರ್ ಕನ್ಹಯ್ಯಾ ಲಾಲ್ ಅವರನ್ನ ಹತ್ಯೆಗೈದಿದ್ದರು. ಬಿಜೆಪಿ ನಾಯಕ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮ ಪೋಸ್ಟ್‌ ಮಾಡಿದ್ದಕ್ಕೆ ಟೈಲರ್ ಕನ್ಹಯ್ಯಲಾಲ್  ಅವರನ್ನು ಹತ್ಯೆ ಮಾಡಲಾಗಿತ್ತು.

Key words: Kanhaiah lal-murder-case- court-accused