‘ತೇಜಸ್‌’ ಯುದ್ಧ ವಿಮಾನದ ಪೈಲಟ್ ಆದ ಕಂಗನಾ

ಬೆಂಗಳೂರು, ಫೆಬ್ರವರಿ 19, 2020 (www.justkannada.in): ನಟಿ ಕಂಗನಾ ರನೌತ್‌ ಈಗ ಭಾರತೀಯ ವಾಯುಪಡೆಯ ಪೈಲಟ್‌ ಧಿರಿಸಿನಲ್ಲಿ ಕಾಣಿಸಿಕೊಂಡು, ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಅಂದಹಾಗೆ ಇದು ‘ತೇಜಸ್‌’ ಹೆಸರಿನ ಸಿನಿಮಾದ ಪೋಸ್ಟರ್‌. ಈ ಸಿನಿಮಾದಲ್ಲಿ ಕಂಗನಾ ವಾಯುಪಡೆ ಪೈಲಟ್‌ ಆಗಿ ಅಭಿನಯಿಸಲಿದ್ದಾರೆ.

‘ಟೀಮ್ಸ್ ಕಂಗನಾ ರನೌತ್‌’ ಸಾಮಾಜಿಕ ಈ ಪೋಸ್ಟರ್‌ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದೆ.
ಈ ಮೂಲಕ ಕಂಗನಾ ಮುಂದಿನ ಚಿತ್ರವನ್ನು ಬಹಿರಂಗಪಡಿಸಿದೆ.

‘ಸಮವಸ್ತ್ರ ಧರಿಸಿ ದೇಶಕ್ಕಾಗಿ ಹಲವು ತ್ಯಾಗಗಳನ್ನು ಮಾಡುತ್ತಿರುವ ಧೈರ್ಯವಂತ ಮತ್ತು ಸದೃಢ ಮಹಿಳೆಯರಿಗಾಗಿ…ಕಂಗಾನ ಮುಂದಿನ ಚಿತ್ರ ತೇಜಸ್‌ನಲ್ಲಿ ವಾಯುಪಡೆ ಪೈಲಟ್‌ ಆಗಿ ಅಭಿನಯಿಸಲಿದ್ದಾರೆ’ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಕಟಿಸಿಕೊಂಡಿದೆ. ಆರ್‌ಎಸ್‌ವಿಪಿ ಮೂವೀಸ್‌ ಚಿತ್ರ ನಿರ್ಮಾಣ ಮಾಡುತ್ತಿದೆ.