ನಿಮಗೆ ಬಹಳ ಪ್ರೀತಿ ಇದ್ರೆ ಕನಕಪುರವನ್ನೇ ಒಂದು ಜಿಲ್ಲೆ ಮಾಡಿಬಿಡಿ- ಡಿಕೆ ಶಿವಕುಮಾರ್ ಗೆ ಆರ್.ಅಶೋಕ್ ಟಾಂಗ್.

ಬೆಂಗಳೂರು,ಅಕ್ಟೋಬರ್,25,2023(www.justkannada.in): ಕನಕಪುರವನ್ನು ಬೆಂಗಳೂರಿಗೆ ಸೇರ್ಪಡೆ ಕುರಿತ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆಗೆ ಟಾಂಗ್ ನೀಡಿರುವ ಮಾಜಿ ಸಚಿವ ಆರ್.ಅಶೋಕ್, ನಿಮಗೆ ಬಹಳ ಪ್ರೀತಿ ಇದ್ರೆ ಕನಕಪುರವನ್ನೇ ಒಂದು ಜಿಲ್ಲೆ ಮಾಡಿಬಿಡಿ ಎಂದು ಕಿಡಿಕಾರಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಆರ್.ಅಶೋಕ್,  ಡಿ.ಕೆ. ಶಿವಕುಮಾರ್ ಏನೇ ಮಾಡಿದರೂ ಮೊದಲು ಬ್ಯುಸಿನೆಸ್ ಇರುತ್ತದೆ, ನಂತರ ಹವ್ಯಾಸ ಇರುತ್ತದೆ.  ಉಚಿತ ಯೋಜನೆಗಳನ್ನ ನೀಡಲು ಇವರ ಬಳಿ ಹಣವೇ ಇಲ್ಲ. ಇನ್ನು ಬ್ರ್ಯಾಂಡ್​ ಬೆಂಗಳೂರು ಹೇಗೆ ಮಾಡುತ್ತೀರಾ? ಫೋಟೋ ತೆಗೆದುಕೊಳ್ಳೋದು ಅಷ್ಟೇ ಬ್ಯ್ರಾಂಡ್​ ಬೆಂಗಳೂರು ಆಗಿದೆ. ಬೆಂಗಳೂರಿನ ಜನ ನೆಮ್ಮದಿಯಾಗಿ ಇರಲು ಬಿಡಿ. ನಿಮಗೆ ಬಹಳ ಪ್ರೀತಿ ಇದ್ದರೆ ಕನಕಪುರವನ್ನೇ ಒಂದು ಜಿಲ್ಲೆ ಮಾಡಿಬಿಡಿ ಎಂದರು.

ಡಿ.ಕೆ. ಶಿವಕುಮಾರ್ ಮತ್ತು ಕುಮಾರಸ್ವಾಮಿ ಜಗಳದಲ್ಲಿ ಬೆಂಗಳೂರು ಬಡವಾಗಿದೆ. ರಾಮನಗರ ಜಿಲ್ಲೆ ಮಾಡಿದಾಗ ಡಿಕೆ ಶಿವಕುಮಾರ್ ಶಾಸಕರಾಗಿದ್ದರು. ಆಗ ಯಾಕೆ ಪ್ರತಿಭಟನೆ ಮಾಡಲಿಲ್ಲ? ಹೇಗೂ ರಾಮನಗರದಿಂದ ಮೆಡಿಕಲ್ ಕಾಲೇಜು ತೆಗೆದುಕೊಂಡು ಹೋಗಿದ್ದೀರಾ, ಕನಕಪುರವನ್ನೇ ಜಿಲ್ಲೆ ಮಾಡಿಬಿಡಿ ಎಂದು ಶಾಸಕ ಆರ್​ ಅಶೋಕ್ ಚಾಟಿ ಬೀಸಿದರು.

Key words: Kanakapur – district – R. Ashok- Tong – DK Shivakumar.