ಕಲ್ಯಾಣ ಕರ್ನಾಟಕಕ್ಕೆ ಕಾಂಗ್ರೆಸ್ ನಿಂದ ದ್ರೋಹ:  ದೊಡ್ಡ ದೊಡ್ಡ ನಾಯಕರಿದ್ರೂ ಅಭಿವೃದ್ಧಿ ಇಲ್ಲ- ಸಿಎಂ ಬೊಮ್ಮಾಯಿ ಕಿಡಿ

ಕಲ್ಬುರ್ಗಿ,ಏಪ್ರಿಲ್,20,2023(www.justkannada.in):  ಕಲ್ಯಾಣ ಕರ್ನಾಟಕಕ್ಕೆ ಕಾಂಗ್ರೆಸ್ ದ್ರೋಹ ಮಾಡಿದೆ.  ದೊಡ್ಡ ದೊಡ್ಡ ನಾಯಕರಿದ್ದರೂ ಕಲ್ಯಾಣ ಕರ್ನಾಟಕ ಅಭಿವೃದ್ದಿಯಾಗಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸಿಎಂ ಬಸವರಾಜ ಬೊಮ್ಮಯಿ ಪರೋಕ್ಷವಾಗಿ  ವಾಗ್ದಾಳಿ ನಡೆಸಿದರು.

ಅಫಜಲಪುರದಲ್ಲಿ ಬಿಜೆಪಿ ಅಭ್ಯರ್ಥಿ ಮಾಲೀಕಯ್ಯ ಗುತ್ತೇದಾರ್ ಪರ ಪ್ರಚಾರ ನಡೆಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಸುಳ್ಳು ಸುದ್ದಿ ಹರಡಿಸುತ್ತಿದೆ. ಸುಳ್ಳು ಭರವಸೆ ನೀಡುತ್ತಿದೆ. ದೊಡ್ಡ ದೊಡ್ಡ ನಾಯಕರಿದ್ದರೂ ಅಭಿವೃದ್ದಿ ಕಂಡಿಲ್ಲ. ನಮ್ಮ ಸರ್ಕಾರದಲ್ಲಿ ಅಭಿವೃದ್ದಿಯಗಿದೆ.  ಎಲ್ಲಾ ಸಮುದಾಯಗಳಿಗೆ ನಾವು ಮೀಸಲಾತಿ ನೀಡಿದ್ದೇವೆ  ಎಂದರು.

ನಾವು ರಿಪೋರ್ಟ್ ಕಾರ್ಡ್ ಇಟ್ಟುಕೊಂಡು ಮತ ಕೇಳುತ್ತಿದ್ದೇವೆ.  ಈ ಬಾರಿ ಅಫಜಲಪುರದಲ್ಲಿ ಬಿಜೆಪಿ ಗಾಳಿ ಬೀಸುತ್ತಿದೆ. ದಾಖಲೆ ಮಟ್ಟದಲ್ಲಿ ಗೆಲುವು ಸಾಧಿಸುತ್ತೇವೆ  ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

Key words: kalyana Karnataka –Congress-no development -CM Bommai