Friday, August 14, 2026

BDA Apartments

Home Front Page ಮಲ್ಲಿಕಾರ್ಜುನ ಖರ್ಗೆ ಟಾರ್ಗೆಟ್ ಮಾಡುವ ಉದ್ಧೇಶವಿಲ್ಲ- ಪ್ರಧಾನಿ ಮೋದಿ ಪ್ರವಾಸ ಕುರಿತು ನಳೀನ್ ಕುಮಾರ್ ಕಟೀಲ್...

ಮಲ್ಲಿಕಾರ್ಜುನ ಖರ್ಗೆ ಟಾರ್ಗೆಟ್ ಮಾಡುವ ಉದ್ಧೇಶವಿಲ್ಲ- ಪ್ರಧಾನಿ ಮೋದಿ ಪ್ರವಾಸ ಕುರಿತು ನಳೀನ್ ಕುಮಾರ್ ಕಟೀಲ್ ಪ್ರತಿಕ್ರಿಯೆ.

ಕಲ್ಬುರ್ಗಿ,ಜನವರಿ,19,2023(www.justkannada.in):  ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಕಲ್ಬುರ್ಗಿ ಹಾಗೂ ಯಾದಗಿರಿ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಪ್ರಧಾನಿ ಮೋದಿ  ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಲ್ಬರ್ಗಿಗೆ ಬಂದಿಳಿದು ಮಾಧ್ಯಮಗಳ ಜೊತೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್,  ದೇಶದಲ್ಲಿ ಕಾಂಗ್ರೆಸ್ ಸುದೀರ್ಘ ಆಡಳಿತ ನಡೆಸಿದೆ. ಆದರೆ ಕಾಂಗ್ರೆಸ್ ಯಾವುದೇ ಅಭಿವೃದ್ದಿ ಮಾಡಿಲ್ಲ. ರಾಜ್ಯ, ದೇಶದಲ್ಲಿ ಡಬಲ್ ಇಂಜಿನ್ ಸರ್ಕಾರ ಇದೆ. ಮಲ್ಲಿಕಾರ್ಜುನ ಖರ್ಗೆ ಟಾರ್ಗೆಟ್ ಮಾಡುವ ಉದ್ದೇಶವಿಲ್ಲ. ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಆಗಮಿಸುತ್ತಿದ್ದಾರೆ ಎಂದರು.

Key words: kalburgi-PM Modi-tour-BJP-Nalin kumar katil