ಸಂಕ್ರಾಂತಿಗೆ ಸಖತ್ ಸುದ್ದಿಯನ್ನೇ ನೀಡಿದ ಕಬ್ಜ ಟೀಂ! ಕಿಚ್ಚ-ಉಪ್ಪಿ ಜುಗಲ್ಬಂದಿ ನೋಡಲು ರೆಡಿಯಾಗಿ !

ಬೆಂಗಳೂರು, ಜನವರಿ 15, 2021 (www.justkannada.in): ಸಂಕ್ರಾಂತಿಗೆ ಸರ್ಪ್ರೈಜ್ ನೀಡುವುದಾಗಿ ಹೇಳಿದ್ದ ಕಬ್ಜ ಚಿತ್ರ ತಂಡ ಭರ್ಜರಿ ಸುದ್ದಿಯನ್ನೇ ನೀಡಿದೆ!

ಯೆಸ್. ಕಬ್ಜ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಸುದೀಪ್ ಅವರ ಖಡಕ್ ಪೋಸ್ಟರ್ ರಿಲೀಸ್ ಮಾಡಿದ್ದು, ಅಭಿಮಾನಿಗಳ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

ಈ ಮೂಲಕ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತೊಮ್ಮೆ ಒಟ್ಟಿಗೆ ಅಭಿನಯಿಸುತ್ತಿದ್ದಾರೆ.

ಭಾರ್ಗವ ಬಕ್ಷಿ ಪಾತ್ರದ ಮೂಲಕ ಮತ್ತೊಮ್ಮೆ ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆ ನಟಿಸುತ್ತಿದ್ದಾರೆ.