ಅಕ್ರಮ ರೆಸಾರ್ಟ್: ಕಬಿನಿ ಉಳಿವಿಗಾಗಿ ಶುರುವಾಯ್ತು ಹೋರಾಟ

ಮೈಸೂರು,ಜುಲೈ,24,2025 (www.justkannada.in): ಕಬಿನಿ ಉಳಿಸುವ ಹೋರಾಟದ‌ ಕಿಚ್ಚು ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಳ್ತಿದೆ.‌ ಕಬಿನಿ ಹಿನ್ನೀರಿನಲ್ಲಿ ತಲೆ ಎತ್ತಿರುವ ಅಕ್ರಮ ರೆಸಾರ್ಟ್ ಗಳ ಕುರಿತ ಆಕ್ರೋಶ ಹೋರಾಟಕ್ಕೆ ನಾಂದಿ ಹಾಡುತ್ತಿದೆ. ಇದಕ್ಕೆ ಪೂರಕವಾಗಿ ಸಾಮಾಜಿಕ ಜಾಲತಾಣದಲ್ಲಿ ಕ್ಯಾಂಪೆನ್ ಗಳು ಆರಂಭವಾಗಿದ್ದು, ಭಿನ್ನ- ವಿಭಿನ್ನ ಪೋಸ್ಟರ್ ಗಳ ಮೂಲಕ ಜಾಗೃತಿ ಶುರುವಾಗಿದೆ.

ಕಬಿನಿ ಹಿನ್ನೀರಿನ‌ ಅಕ್ರಮ ರೆಸಾರ್ಟ್ ಗಳ ಬಗ್ಗೆ ಸುದ್ದಿ ಭಿತ್ತರವಾದ  ಬಳಿಕ ಹೆಚ್.ಡಿ.ಕೋಟೆ ಭಾಗದಲ್ಲಿ ಸಂಚಲನ ಸೃಷ್ಟಿ.ಯಾಗಿದೆ. ಅನಧಿಕೃತವಾಗಿ, ಅಕ್ರಮವಾಗಿ ರೆಸಾರ್ಟ್ ನಿರ್ಮಿಸಿರುವವರ ಎದೆ ನಡುಕ ಉಂಟಾಗಿದೆ.

ಅಕ್ರಮ ರೆಸಾರ್ಟ್ ಗಳ ಬಗ್ಗೆ ಕೆಡಿಪಿ ಸಭೆಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾದ ಬಳಿಕ ರೈತ ಮುಖಂಡರು, ಪರಿಸರ ಪ್ರೇಮಿಗಳು ಅಖಾಡಕ್ಕೆ ಧುಮುಕಿದ್ದಾರೆ. ಜಾಲತಾಣಗಳ ಮೂಲಕ ಕ್ಯಾಂಪೇನ್ ಆರಂಭಿಸಿದ್ದಾರೆ.

ಕೇವಲ ಕರ್ನಾಟಕದ‌ ಮೈಸೂರು, ಮಡಿಕೇರಿ‌ಭಾಗ ಮಾತ್ರವಲ್ಲದೇ ಪಕ್ಕದ ಕೇರಳದ ವೈನಾಡಿನ ಯುವಕರು ಕ್ಯಾಂಪೇನ್ ಆರಂಭಿಸಿದ್ದಾರೆ. ರೈತರು, ಹೋರಾಟಗಾರರು, ಪರಿಸರ ಪ್ರೇಮಿಗಳು, ಯುವಕರ ಪಡೆ ರ್ಯಾಲಿ, ಪ್ರತಿಭಟನೆ ನಡೆಸಲು ಸಿದ್ಧತೆ ಮಾಡಿಕೊಳ್ತಿದೆ. ಪೂರ್ವಭಾವಿಯಾಗಿ ಸೋಶಿಯಲ್ ಮೀಡಿಯಾದಲ್ಲಿ ಕಾಡು ಉಳಿಸಿ ಕರೆ ನೀಡಿದೆ . ಎಐ ಚಿತ್ರಗಳು  , ವಿಡಿಯೋಗಳ ಮೂಲಕ ಭಿನ್ನ- ವಿಭಿನ್ನ ಜಾಗೃತಿ ಮೂಡಿಸುತ್ತಿವೆ

ಈ ನಡುವೆ ಶಾಸಕ ಅನಿಲ್ ಚಿಕ್ಕಮಾದು, , ಅಕ್ರಮ ರೆಸಾರ್ಟ್ ಗಳ ನಿರ್ಮಾಣದಲ್ಲಿ ನನ್ನ ಪಾತ್ರವಿಲ್ಲ. ಅಧಿಕಾರಿಗಳು ಈ ಕುರಿತು ಸೂಕ್ತ ಕ್ರಮ ಕೈಗೊಳ್ತಾರೆ ಅಂತ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೇಳಿಕೆ ನೀಡಿದ್ದಾರೆ. ಇದು ಹೋರಾಟಗಾರರ ಹೋರಾಟಕ್ಕೆ ಮತ್ತಷ್ಟು ಕಿಚ್ಚು‌ ಹಚ್ಚಿದೆ

ಒಟ್ಟಾರೆ, ಕಬಿನಿ ಹಿನ್ನೀರಿನ ಅಕ್ರಮ ರೆಸಾರ್ಟ್ ಗಳ ಹೋರಾಟ ಆರಂಭವಾಗಿದ್ದು, ಯಾವಾಗ ಇವುಗಳನ್ನ ಡೆಮಾಲಿಷ್ ಮಾಡ್ತಾರೆ ಅಂತ ಕಬಿನಿ‌ ಹೋರಾಟಗಾರರು ಪ್ರಶ್ನೆ ಮಾಡ್ತಿದ್ದಾರೆ.vtu

Key words: Illegal Resort,  starts, Kabini, survival