ಮೈಸೂರು,ಜೂನ್,2,2025 (www.justkannada.in): ಕೇರಳಾದ ವೈನಾಡು ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ಜಿಲ್ಲೆ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದ್ದು ಜಲಾಶಯ ಭರ್ತಿಗೆ ಕೇವಲ ನಾಲ್ಕು ಅಡಿ ಮಾತ್ರ ಬಾಕಿ ಇದೆ.
ಜಲಾಶಯದ ಗರಿಷ್ಠ ಮಟ್ಟ 2284 ಅಡಿಗಳಾಗಿದ್ದು ಇಂದಿನ ನೀರಿನ ಮಟ್ಟ 2280.67 ಅಡಿಗಳಿದೆ. ಜಲಾಯಶಕ್ಕೆ 9024 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು ಹೊರ ಹರಿವು 8000 ಕ್ಯೂಸೆಕ್ ಇದೆ. ಇದು ರಾಜ್ಯದಲ್ಲೇ ಮೊಟ್ಟ ಮೊದಲಿಗೆ ತುಂಬುವ ಜಲಾಶಯವಾಗಿದೆ.
ಇನ್ನು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿರುವ ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ 103 ಅಡಿಗೆ ದಾಟಿದೆ. ಕೊಡುಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲೂ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್ ಎಸ್ ಜಲಾಶಯ ವಾಡಿಕೆಗಿಂತ ಮೊದಲೇ ತುಂಬುವ ಲಕ್ಷಣ ಕಾಣುತ್ತಿದೆ. .
ಜಲಾಶಯದ ಗರಿಷ್ಠ ಮಟ್ಟ 124.80 ಅಡಿಗಳಾಗಿದ್ದು, ಪ್ರಸ್ತುತ 103 ಅಡಿಗಳಿಗೆ ನೀರಿನ ಮಟ್ಟ ತಲುಪಿದೆ. ಒಳ ಹರಿವು 17 ಸಾವಿರ ಕ್ಯೂಸೆಕ್ ಇದ್ದು 670 ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗುತ್ತಿದೆ.
Key words: rains, Kabini reservoir, still, fill, Mysore