ಪಾಪದ ಹಣವನ್ನು ಸಂಗ್ರಹಿಸಿ ಅಧಿಕಾರ ಹಿಡಿಯಲು ಹೊರಟಿದ್ದಾರೆ-ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ…

ಮಂಡ್ಯ,ನ,27,2019(www.justkannada.in): ಕುರಿ ಕೋಳಿ ದನಗಳಂತೆ ಶಾಸಕರನ್ನ ಖರೀದಿ ಮಾಡಿದ್ದಾರೆ. ಪಾಪದ ಹಣವನ್ನು ಸಂಗ್ರಹಿಸಿ ಅಧಿಕಾರ ಹಿಡಿಯಲು ಹೊರಟಿದ್ದಾರೆ. ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.

ಕಿಕ್ಕೇರಿಯಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಪ್ರವಾಹದಿಂದ ರೈತರ ಬೆಳೆ ಹಾನಿಯಾಗಿ ಬೀದಿಗೆ ಬಂದಿದ್ರೆ ನಾರಾಯಣಗೌಡ ಸರ್ಕಾರ ಬೀಳಿಸಲು ಬಿಜೆಪಿ ಜೊತೆ ಸೇರಿದ್ದ. ನಾರಾಯಣಗೌಡನಿಗೆ ಐದು ವರ್ಷಗಳ ಕಾಲ ಇರಲೆಂದು ಅಧಿಕಾರ ಕೊಟ್ಟಿದ್ದರು. ಯಡಿಯೂರಪ್ಪನವರ ಕುತಂತ್ರದಿಂದ ನನ್ನನ್ನ‌ ಕೆಳಗಿಳಿಸಿದ. ಕುರಿ ಕೋಳಿ ದನಗಳಂತೆ ಶಾಸಕರನ್ನ ಖರೀದಿ ಮಾಡಿದ್ದಾರೆ. ಈ ಹಿಂದೆಯೂ ಶಾಸಕರನ್ನ ಖರೀದಿ ಮಾಡಿದ್ದರು. 17 ಶಾಸಕರ ರಾಜೀನಾಮೆಗೆ ಏನೇನು ಮಾಡಿದ್ದಾರೆ ಅಂತ ಮಾದ್ಯಮಗಳಲ್ಲಿ ಬಂದಿದೆ. ನಾನು ಪಾಪದ ಹಣ ಸಂಗ್ರಹಿಸಿ ಅಧಿಕಾರ ಉಳಿಸಿಕೊಳ್ಳಬಹುದಿತ್ತು. ಆದರೆ ನಮ್ಮ ತಂದೆ ಅಂತಹ ಕೆಲಸವನ್ನ ಹೇಳಿಕೊಟ್ಟಿಲ್ಲ. ಬಿಜೆಪಿ ಸರ್ಕಾರದಲ್ಲಿ ಒಂದೇ ಒಂದು ಮಾದರಿ ಕ್ಷೇತ್ರವಾಗಿಲ್ಲ ಎಂದು ಟೀಕಿಸಿದರು.

ಬಾಂಬೆ ಕಳ್ಳ ಈ ರೀತಿಯಾಗಿ ಮಾಡಲು ನನ್ನದು ತಪ್ಪಿದೆ. 2013  ರಲ್ಲಿ ನಾರಾಯಣಗೌಡ ಚುನಾವಣೆಗೆ ನಿಂತಾಗ ನನ್ನ ತಂಗಿ ಮನೆ ಮನೆ ಸುತ್ತಿ ಗೆಲ್ಲಿಸಿದ್ದಳು. ಆದರೂ ಅವಳನ್ನ ದೂರಿದ್ದನು. 2018 ರಲ್ಲಿ ನಮ್ಮ ಇಡೀ ಕುಟುಂಬ ವಿರೋಧ ಮಾಡಿದರೂ ಟಿಕೆಟ್ ಕೊಡಿಸಿ ಗೆಲ್ಲಿಸಿದೆ. ನಾನು ಬಜೆಟ್ ತಯಾರಿಯಲ್ಲಿದ್ದಾಗ ನಾಟಕ ಮಾಡ್ಕೊಂಡು ಬಾಂಬೆಯಲ್ಲಿ ಆಸ್ಪತ್ರೆ ಸೇರಿದ್ದ. ದೇವರು ಮೆಚ್ಚುಕೊಳ್ತಾನಾ ನಿನ್ನಂತವನನ್ನ ಎಂದು ಹೆಚ್.ಡಿ ಕೆ ಕಿಡಿಕಾರಿದರು.

ಚೆಲುವರಾಯಸ್ವಾಮಿ ನಾನು ಮಂಡ್ಯ ಜಿಲ್ಲೆ ಜನರ ಕ್ಷಮೆ ಕೇಳುವಂತೆ ಹೇಳಿದ್ದಾನೆ. ನಾನು ಕ್ಷಮೆ ಕೇಳಲು ಯಾವುದೇ ಹಿಂಜರಿಕೆ ಇಲ್ಲ. ಆದರೆ ಯಾವ ಕಾರಣಕ್ಕೆ ನಾನು ಕ್ಷಮೆ ಕೇಳಬೇಕು ಎಂದು ಹೇಳಲಿ ಎಂದು ಹೆಚ್.ಡಿಕೆ ಪ್ರಶ್ನಿಸಿದರು.

Key words: k.r pete- by election-former cm- hd kumarswamy- bjp