ಕೆಲ ಯುವಕರು “ಪೋಕ್ಸೋ”  ಪ್ರಕರಣಗಳಲ್ಲಿಸಿಲುಕಿ  ಜೀವನ  ಹಾಳು ಮಾಡಿಕೊಳ್ಳುತ್ತಿದ್ದಾರೆ: ನ್ಯಾ. ಎಚ್‌.ಶಶಿಧರ ಶೆಟ್ಟಿ

Some youths are getting involved in POCSO cases and ruining their lives due to age-related physical attraction. Similarly, in recent days, the number of youth falling prey to drugs is increasing. To destroy a country, it is not necessary to drop missiles or bombs, it is enough to instill drug addiction in the youth of the country, and that country will destroy itself. Therefore, the youth should not fall prey to bad habits like drugs, alcohol, smoking and should focus on academic achievement. Only then can they rise to a higher position in society, said K. Shashidhar Shetty.

ಬೆಂಗಳೂರು, ನ.೧೯,೨೦೨೫: ಸಮಾಜದಲ್ಲಿಅನ್ಯಾಯ ಹಾಗೂ ಭ್ರಷ್ಟಾಚಾರ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಅವುಗಳ ವಿರುದ್ಧ ಯುವಜನತೆ ಧ್ವನಿ ಎತ್ತಬೇಕಿದೆ ಎಂದು ಜಿಲ್ಲಾನ್ಯಾಯಾಧೀಶ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್‌.ಶಶಿಧರ ಶೆಟ್ಟಿ ಹೇಳಿದ್ದಾರೆ.

ವರ್ವ್‌ ಫೌಂಡೇಷನ್‌, ಜಿಬಿಎ ಸಹಯೋಗದಲ್ಲಿಬುಧವಾರ ನಗರದ ಮಾಗಡಿ ರಸ್ತೆಯ ಬಿಜಿಎ ಪ್ರಥಮ ದರ್ಜೆ ಕಾಲೇಜು ಮತ್ತು ಸಂಯುಕ್ತ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ‘ಕಾನೂನು ಅರಿವು’ ಕುರಿತ ಕಾರ್ಯಕ್ರಮದಲ್ಲಿಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತ ದಿನನಿತ್ಯ ನಡೆಯುತ್ತಿರುವ ಅನ್ಯಾಯ, ಅಕ್ರಮಗಳ ಬಗ್ಗೆ ಗಮಹರಿಸಿ ಅವುಗಳ ವಿರುದ್ಧ ಹೋರಾಟ ನಡೆಸಿ ನ್ಯಾಯ ದೊರಕಿಸಿಕೊಡುವ ಗುಣ ಬೆಳೆಸಿಕೊಳ್ಳಬೇಕು ಎಂದರು.

ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ಅಡಿಯಲ್ಲಿಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ರಾಜ್ಯಾದ್ಯಂತ ಶಾಲಾ-ಕಾಲೇಜುಗಳಲ್ಲಿಕಾನೂನು ಬಗ್ಗೆ ಜಾಗೃತಿ ಮೂಡಿಸುವ ಕ್ಲಬ್‌ಗಳನ್ನು ಆರಂಭಿಸುತ್ತಿದೆ. ಅವುಗಳ ಮೂಲಕ ಶೋಷಿತರು, ದುರ್ಬಲರು, ಅನ್ಯಾಯಕ್ಕೆ ಒಳಗಾದವರನ್ನು ಗುರುತಿಸಿ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡುತ್ತಿದೆ. ಜತೆಗೆ ವ್ಯಾಜ್ಯಗಳನ್ನು ಗ್ರಾಮಮಟ್ಟದಲ್ಲಿಯೇ ಬಗೆಹರಿಸುವ ಮೂಲಕ ವ್ಯಾಜ್ಯ ಮುಕ್ತ ಗ್ರಾಮಗಳನ್ನು ನಿರ್ಮಿಸುವ ಗುರಿ ಇದೆ ಎಂದು ಹೇಳಿದರು.

ವಯೋಸಹಜ ದೈಹಿಕ ಅಕರ್ಷಣೆಗೆ ಒಳಗಾಗಿ ಕೆಲವು ಯುವಕರು ಪೋಸ್ಕೋ ಪ್ರಕರಣಗಳಲ್ಲಿಸಿಲುಕಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅಂತೆಯೇ ಇತ್ತೀಚಿನ ದಿನಗಳಲ್ಲಿಯುವಜನತೆ ಮಾದಕ ವಸ್ತುಗಳಿಗೆ ಬಲಿಯಾಗುತ್ತಿರುವುದು ಹೆಚ್ಚುತ್ತಿದೆ. ಒಂದು ದೇಶವನ್ನು ನಾಶ ಮಾಡಬೇಕಾದರೆ ಕ್ಷಿಪಣಿ ಅಥವಾ ಬಾಂಬ್‌ ಹಾಕಬೇಕಿಲ್ಲ, ದೇಶದ ಯುವಜನತೆಗೆ ಮಾದಕ ವಸ್ತುಗಳ ಚಟ ಅಂಟಿಸಿದರೆ ಸಾಕು, ಆ ದೇಶ ತನ್ನಿಂತಾನೇ ನಾಶವಾಗುತ್ತದೆ. ಹಾಗಾಗಿ ಯುವಜನತೆ ಮಾದಕ ವಸ್ತುಗಳು, ಮದ್ಯ, ಧೂಮಪಾನದಂತಹ  ದುಶ್ಚಟಗಳಿಗೆ ಬಲಿಯಾಗದೆ ಶೈಕ್ಷಣಿಕ ಸಾಧನೆಯತ್ತ ಗಮನಹರಿಸಬೇಕು. ಆಗ ಮಾತ್ರ ಸಮಾಜದಲ್ಲಿಉನ್ನತ ಸ್ಥಾನಕ್ಕೆ ಏರಲು ಸಾಧ್ಯ ಎಂದು ಕೆ.ಶಶಿಧರಶೆಟ್ಟಿ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಜಿಬಿಎ ಹಿರಿಯ ಸಹಾಯಕ ನಿರ್ದೇಶಕ ಎಂ.ಮುನಿಶಾಮಪ್ಪ, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಆನಂದ್‌ ಮತ್ತು ಜಿಬಿಎ ಸಂಯುಕ್ತ ಪಿಯು ಕಾಲೇಜಿನ ಪ್ರಾಂಶುಪಾಲ ಬಾಲು, ವರ್ವ್‌ ಫೌಂಡೇಷನ್‌ ಅಧ್ಯಕ್ಷ ಸಿ.ವಿ.ತಿರುಮಲರಾವ್‌  ಉಪಸ್ಥಿತರಿದ್ದರು.

key words:  youth are ruining their lives, getting caught up, “POCSO” cases, Justice H. Shashidhar Shetty

SUMMARY:

Some youth are ruining their lives by getting caught up in “POCSO” cases: Justice H. Shashidhar Shetty