ದೆಹಲಿ ಹೈಕೋರ್ಟ್ ನಲ್ಲಿ ನಮಗೆ ನ್ಯಾಯ ಸಿಕ್ಕಿದೆ-ಸಂತಸ ವ್ಯಕ್ತಪಡಿಸಿದ ಸಂಸದ ಡಿ.ಕೆ ಸುರೇಶ್..

ನವದೆಹಲಿ,ಅ,23,2019(www.justkannada.in): ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಜಾಮೀನು ಮಂಜೂರಾದ ಹಿನ್ನೆಲೆ ಡಿ.ಕೆ ಶಿವಕುಮಾರ್ ಸಹೋದರ ಡಿ.ಕೆ ಸುರೇಶ್ ಸಂತಸ ವ್ಯಕ್ತಪಡಿಸಿದ್ದಾರೆ.

ನಮಗೆ ದೆಹಲಿ ಹೈಕೋರ್ಟ್ ನಲ್ಲಿ ನ್ಯಾಯ ಸಿಕ್ಕಿದೆ. ಜಾಮೀನು ಸಿಕ್ಕಿರುವುದರಿಂದ ಸಂತೋಷವಾಗಿದೆ ಎಂದು  ಸಂಸದ ಡಿ.ಕೆ ಸುರೇಶ್ ಸಂತಸ ವ್ಯಕ್ತಪಡಿಸಿದರು.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿ ಜೈಲುವಾಸ ಅನುಭವಿಸುತ್ತಿದ್ದ ಮಾಜಿ ಸಚಿವ ಡಿಕೆ ಶಿವಕುಮಾರ್ ಗೆ ಇಂದು ದೆಹಲಿ ಹೈಕೋರ್ಟ್ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ. ಈ  ಕುರಿತು ಸಂತಸ ಹಂಚಿಕೊಂಡಿರುವ ಡಿ.ಕೆ ಸುರೇಶ್, ನಮಗೆ ದೆಹಲಿ ಹೈಕೋರ್ಟ್ ನಲ್ಲಿ ನ್ಯಾಯ ಸಿಕ್ಕಿದೆ. ಕೋರ್ಟ್ ನಮ್ಮ ಮನವಿಯನ್ನ ಪುರಸ್ಕರಿಸಿ ಜಾಮೀನು ನೀಡಿದೆ ಎಂದು ನುಡಿದರು.

ಕಳೆದ 50 ದಿನಗಳಿಂದ ಮಾನಸಿಕ ತೊಂದರೆ ಅನುಭವಿಸಿದ್ದವು. ಇನ್ನು ಇಡಿ ಸುಪ್ರೀಂಕೋರ್ಟ್ ಗೆ ಹೋಗುವ ಬಗ್ಗೆ ನನಗೆ ಮಾಹಿತಿ ಇಲ್ಲ. ಇಡಿ ಸುಪ್ರೀಂಕೋರ್ಟ್ ಗೆ ಹೋದರೂ ನಾವು ಅಲ್ಲಿಯೂ ಹೋರಾಟ ಮಾಡುತ್ತೇವೆ. ವಕೀಲರ ಜತೆ ಚರ್ಚಿಸಿ ಮುಂದಿನ ನಡೆ ತೀರ್ಮಾನಿಸುತ್ತೇವೆ ಎಂದು ಡಿ.ಕೆ ಸುರೇಶ್ ತಿಳಿಸಿದರು.

Key words: justice – Delhi -High Court-MP DK Suresh – happy – DK shivakumar-bail.