RRR ಸಿನಿಮಾಗೆ ಕನ್ನಡದಲ್ಲಿ ಡಬ್ ಮಾಡಿದ ಜೂ. ಎನ್ ಟಿ ಆರ್

ಬೆಂಗಳೂರು, ಡಿಸೆಂಬರ್ 11, 2021 (www.justkannada.in): RRR ಸಿನಿಮಾಗೆ ಜೂ. ಎನ್ ಟಿ ಆರ್ ಕನ್ನಡದಲ್ಲೇ ಡಬ್​ ಮಾಡಿದ್ದಾರೆ.

ಸಾಕಷ್ಟು ಸದ್ದು ಮಾಡುತ್ತಿರುವ ಸಿನಿಮಾದ ಒರಿಜಿನಲ್ ತೆಲುಗಿನ ಟ್ರೇಲರ್ ಯೂಟ್ಯೂಬ್​ನಲ್ಲಿ ಒಂದೇ ದಿನದಲ್ಲಿ ಎರಡು ಕೋಟಿಗೂ ಹೆಚ್ಚು ವೀಕ್ಷಣೆ ಪಡೆದಿದೆ.

ಹಿಂದಿ, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲೂ ಸಿನಿಮಾ ಡಬ್ ಆಗುತ್ತಿದೆ. ಈ ಭಾಷೆಗಳಲ್ಲೂ ಟ್ರೇಲರ್ ಲಾಂಚ್ ಆಗಿದೆ.

ಕನ್ನಡದ ಆರ್​ಆರ್​ಆರ್ ಟ್ರೇಲರ್​ನಲ್ಲಿ ಜೂನಿಯರ್ ಎನ್​ಟಿಆರ್ ಮತ್ತು ರಾಮಚರಣ್ ತೇಜಾ ಅವರು ತಮ್ಮ ಪಾತ್ರಗಳಿಗೆ ತಾವೇ ಧ್ವನಿ ಕೊಟ್ಟಿದ್ಧಾರೆ.

ಒರಾಯನ್​ ಮಾಲ್​ ಪಿವಿಆರ್​​ನಲ್ಲಿ ಆರ್​ಆರ್​ಆರ್ ಟ್ರೇಲರ್ ಬಿಡುಗಡೆ ನಿಮಿತ್ತ ನಡೆದ ಸಂವಾದ ಕಾರ್ಯಕ್ರಮ ನಡೀತು. ಜೂನಿಯರ್ ಎನ್​ಟಿಆರ್ ಅವರು ತಮ್ಮ ಕನ್ನಡ ಡಬಿಂಗ್ ಬಗ್ಗೆ ಮಾತನಾಡಿದ್ದರು.