ಮೈಸೂರು: ಪತ್ರಕರ್ತರಿಂದ ವಾರ್ಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ

ಮೈಸೂರು,ಜುಲೈ,18,2025 (www.justkannada.in): ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ 2024-25ನೇ ಸಾಲಿನ ಅತ್ಯುತ್ತಮ ಕನ್ನಡ, ಇಂಗ್ಲಿಷ್ ವರದಿಗಳ ಹಾಗೂ ಛಾಯಾಚಿತ್ರ, ವಿದ್ಯುನ್ಮಾನ ವರದಿಗಳ ವಾರ್ಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಪ್ರಶಸ್ತಿಗೆ ತಮ್ಮ ವರದಿ, ಛಾಯಾಚಿತ್ರ ಕಳುಹಿಸುವವರು ಈ ಕೆಳಕಂಡ ನಿಯಮಗಳನ್ನು ಪಾಲಿಸಬೇಕು. ನಿಯಮಗಳು ಹೀಗಿದೆ..

ದಿನಾಂಕ : 01-06-2024 ರಿಂದ  31-05-2025 ಅವಧಿಯಲ್ಲಿ ವರದಿ ಪ್ರಕಟವಾಗಿರಬೇಕು. ಸಂಘದ ಸದಸ್ಯರಲ್ಲದವರಿಗೆ ಅವಕಾಶವಿಲ್ಲ. ಅಸಕ್ತರು ಮೂರು ನಕಲಿ ಪ್ರತಿಯ ಜೊತೆಗೆ ಒಂದು ಮೂಲ ಪ್ರತಿ ನೀಡಬೇಕು‌. ಆಸಕ್ತ ಛಾಯಾಗ್ರಾಹಕರು 8 x 12 ಅಳತೆಯ ಮೂರು ಛಾಯಾಚಿತ್ರ ಮತ್ತು ಫೋಟೋ ಪ್ರಕಟಗೊಂಡ ಪತ್ರಿಕೆಯ ಮೂಲ ಪ್ರತಿಯನ್ನು ಸಲ್ಲಿಸಬೇಕು.

ವಿದ್ಯುನ್ಮಾನ ವರದಿ ನೀಡುವವರು ಸುದ್ದಿ ಮತ್ತು ದೃಶ್ಯದ ಕ್ಲಿಪ್ಪಿಂಗ್ ಒಳಗೊಂಡ ಮೂರು ಸಿಡಿ ಪ್ರತಿಗಳ‌ನ್ನು ನೀಡಬೇಕು. ಜುಲೈ 31ರೊಳಗೆ ನಿಮ್ಮ ವರದಿಯನ್ನು ಅಧ್ಯಕ್ಷರು/ಪ್ರಧಾನ ಕಾರ್ಯದರ್ಶಿ ಹೆಸರಿಗೆ ಸಂಘದ ಮೇಲ್ಕಂಡ ವಿಳಾಸಕ್ಕೆ ಕಳುಹಿಸಬೇಕು. ಆನಂತರ ಬರುವ ಅರ್ಜಿ ವರದಿಗಳನ್ನು ಸ್ವೀಕರಿಸುವುದಿಲ್ಲ.

ಹೆಚ್ಚಿನ ವಿವರಗಳಿಗೆ ಮೊಬೈಲ್ ದೂರವಾಣಿ ಸಂಖ್ಯೆ : 9741511340, 9845653548, 9740557277 ಇಲ್ಲಿಗೆ ಸಂಪರ್ಕಿಸಲು ಕೋರಲಾಗಿದೆ.vtu

Key words: Applications, invited, journalists, annual award