ಪತ್ರಕರ್ತ ಮಿತ್ರರು ಆರೋಗ್ಯದ ಮೇಲೆ ಹೆಚ್ಚು ನಿಗಾವಹಿಸಿ :  ಡಿಸಿಎಂ ಡಾ.ಅಶ್ವತ್ಥನಾರಾಯಣ ಮನವಿ

ಬೆಂಗಳೂರು,ಅಕ್ಟೋಬರ್,18,2020(www.justkannada.in) : ಪತ್ರಕರ್ತ ಪವನ್ ಹೆತ್ತೂರು ಅಕಾಲಿಕ ಮರಣ ನನಗೆ ತೀವ್ರ ಆಘಾತ ಉಂಟು ಮಾಡಿದೆ. ಪತ್ರಕರ್ತ ಮಿತ್ರರು ಆರೋಗ್ಯದ ಮೇಲೆ ಹೆಚ್ಚು ನಿಗಾ ಇಡಬೇಕೆಂದು  ಡಿಸಿಎಂ ಡಾ.ಅಶ್ವತ್ಥನಾರಾಯಣ ಮನವಿ ಮಾಡಿದ್ದಾರೆ.

jk-logo-justkannada-logoಪತ್ರಕರ್ತ ಪವನ್ ಹೆತ್ತೂರು ಚಿಕ್ಕ ವಯಸ್ಸಿಗೆ ಅವರು ಅಗಲಿರುವುದು ಅತ್ಯಂತ ದುಃಖ ಉಂಟು ಮಾಡಿದೆ. ಪ್ರಜಾವಾಣಿ, ಅದಕ್ಕೂ ಹಿಂದೆ ವಿಜಯವಾಣಿ, ಕಸ್ತೂರಿ ವಾಹಿನಿಯಲ್ಲಿ ಕಾರ್ಯ ನಿರ್ವಹಿಸಿದ್ದ ಅವರು, ಮಾಧ್ಯಮ ಲೋಕದಲ್ಲಿ ಉತ್ತಮವಾಗಿ ಬೆಳೆಯುವ ಮೂಲಕ ಭರವಸೆ ಮೂಡಿಸಿದ್ದರು. ಸದ್ಯಕ್ಕೆ ಮೈಸೂರಿನ ಪ್ರಜಾವಾಣಿ ಬ್ಯೂರೋದಲ್ಲಿ ಕೆಲಸ ಮಾಡುತ್ತಿದ್ದ ಪವನ್ ಕೋವಿಡ್ ಗೆ ತುತ್ತಾಗಿದ್ದಾರೆ.Journalist-Allies-Care-Over-Health-DCM Dr. Ashwatthanarayana-requests

ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ಅವರ ಕುಟುಂಬಕ್ಕೆ ದೇವರು ನೀಡಲಿ ಎಂದು ಪ್ರಾರ್ಥಿಸುತ್ತಾನೆ. ಎಲ್ಲ ಪತ್ರಕರ್ತ ಮಿತ್ರರು ಆರೋಗ್ಯದ ಮೇಲೆ ಹೆಚ್ಚು ನಿಗಾ ಇಡಬೇಕೆಂದು ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

key words : Journalist-Allies-Care-Over-Health-DCM Dr. Ashwatthanarayana-requests