Friday, August 14, 2026

BDA Apartments

Home Front Page ಪತ್ರಕರ್ತ ವಾಗೀಶ್ ಕುಮಾರ್ ಇನ್ನಿಲ್ಲ

ಪತ್ರಕರ್ತ ವಾಗೀಶ್ ಕುಮಾರ್ ಇನ್ನಿಲ್ಲ

ಬೆಂಗಳೂರು,ಡಿಸೆಂಬರ್,7,2021(www.justkannada.in):  ಪತ್ರಕರ್ತ ವಾಗೀಶ್ ಕುಮಾರ್ ಜಿ ಎ (46 ವರ್ಷ)ಇಂದು ಬೆಳಗ್ಗೆ ನಿಧನಾರಾಗಿದ್ದಾರೆ.

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ವಾಗೀಶ್ ಅವರು ಪತ್ನಿ ಸುಮಿತ್ರಾ ದೊಡ್ಡಮನಿ, ಮಗಳು ಮಂದಾರ ಹಾಗೂ ಅಪಾರ ಸ್ನೇಹಿತರನ್ನು ಹೊಂದಿದ್ದರು. ಈ ಟಿವಿ ಮೂಲಕ ಟೆಲಿವಿಷನ್ ನ್ಯೂಸ್ ಗೆ ಪಾದಾರ್ಪಣೆ ಮಾಡಿದ್ದ ಅವರು, ಟಿವಿ9, ಕಸ್ತೂರಿ ನ್ಯೂಸ್, ಸಮಯ ಟಿವಿ, ವಿಜಯಕರ್ನಾಟಕ ಸೇರಿದಂತೆ ಹಲವಾರು ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಿದ್ದರು. ಉದಯೋನ್ಮುಖ ಪತ್ರಕರ್ತರಿಗೆ ಮಾರ್ಗದರ್ಶನ ನೀಡುತ್ತಿದ್ದರು.

ವಾಗೀಶ್ ಕುಮಾರ್ ಅವರ ಅಂತಿಮ ವಿಧಿವಿಧಾನ ಅವರ ಸ್ವಂತ ಊರಾದ ಪಂಜಾ ಕುಕ್ಕೆಸುಬ್ರಹ್ಮಣ್ಯ ಹತ್ತಿರ
ಮಾಡಲು ಕುಟುಂಬ ವರ್ಗದವರು ನಿರ್ಧರಿಸಿದ್ದಾರೆ

ಈ ಟಿವಿಯ ಬಳಗದ ಸ್ನೇಹಿತರು ವಾಗೀಶ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಪ್ರೆಸ್ ಕ್ಲಬ್ ಅಧ್ಯಕ್ಷ ಸದಾಶಿವ ಶಣೈ, ಪ್ರಧಾನ ಕಾರ್ಯದರ್ಶಿ ಕಿರಣ್ ಹೆಚ್ ವಿ ಹಾಗೂ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.

key words: Journalist- Vaghesh Kumar – no more