ಪತ್ರಕರ್ತ ಎಲ್ ಅಶ್ವಥನಾರಾಯಣ ಆತ್ಮಹತ್ಯೆ ಯತ್ನಕ್ಕೆ ಸಚಿವ ಡಾ. ಕೆ ಸುಧಾಕರ್ ನೇರ ಕಾರಣ- ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಆರೋಪ….

ಮೈಸೂರು,ಡಿಸೆಂಬರ್,28,2020(www.justkannada.in): ಚಿಕ್ಕಬಳ್ಳಾಪುರದ ಪತ್ರಕರ್ತ ಎಲ್ ಅಶ್ವಥನಾರಾಯಣ ಆತ್ಮಹತ್ಯೆ ಯತ್ನಕ್ಕೆ ಸಚಿವ ಡಾ. ಕೆ ಸುಧಾಕರ್ ನೇರ ಕಾರಣರಾಗಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್  ಆರೋಪಿಸಿದ್ದಾರೆ.

ಮೈಸೂರಿನಲ್ಲಿ ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಆತ್ಮಹತ್ಯೆಗೆ ಯತ್ನಿಸಿರುವ ಅಶ್ವಥನಾರಾಯಣ ಅವರೇ ಬರೆದಿರುವ ಪತ್ರದಲ್ಲೂ ಸಚಿವ ಸುಧಾಕರ್ ಕಾರಣ ಎಂದು ಹೇಳಿದ್ದಾರೆ. ಪತ್ರಕರ್ತರ ಸ್ಥಿತಿಯೇ ಈ ರೀತಿ ಆದರೆ ಜನಸಾಮಾನ್ಯರ ಪರಿಸ್ಥಿತಿ ಹೇಗಿರಬಹುದು. ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಕೂಡಲೇ ಈ ವಿಚಾರವನ್ನು ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು. ತನಿಖೆ ಮುಗಿಯುವವರೆಗೂ ಸುಧಾಕರ್ ರನ್ನು ಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕು. ಈ ಸಂಬಂಧ ಕಾಂಗ್ರೆಸ್‌ ಪಕ್ಷದ ವತಿಯಿಂದ ರಾಜ್ಯಪಾಲರು ಹಾಗೂ ರಾಜ್ಯ ಡಿಜಿಪಿ ಅವರಿಗೆ ದೂರು ನೀಡುತ್ತೇವೆ ಎಂದು ಹೇಳಿದರು.

ಉತ್ತರ ಪ್ರದೇಶದ ಸರ್ಕಾರದ ವರ್ತನೆಗಿಂತ ಕರ್ನಾಟಕದ ಸರ್ಕಾರದ ವರ್ತನೆ‌ ಅತಿ ಕೆಟ್ಟದಾಗಿದೆ. ಬಿಜೆಪಿ ಮಂತ್ರಿಗಳ ವಿರುದ್ದ  ಯಾರಾದ್ರೂ ದೊಡ್ಡ ವ್ಯಕ್ತಿಗಳು ಧ್ವನಿ‌ ಎತ್ತಿದ್ದರೆ ಇಡಿ‌, ಐಟಿಗಳ ಮೂಲಕ‌ ಅವರನ್ನ ಕಟ್ಟಿ ಹಾಕುತ್ತಾರೆ. ಅದೇ ರೀತಿ ಚಿಕ್ಕಬಳ್ಳಾಪುರದ‌  ಪತ್ರಕರ್ತ ಅಶ್ವಥನಾರಾಯಣರಿಗೆ  ಪೊಲೀಸ್ ಇಲಾಖೆ ಮೂಲಕ ತೊಂದರೆ ಕೊಡುತ್ತಿದ್ದಾರೆ. ಖುದ್ದು ಪತ್ರಕರ್ತ ಸಚಿವ ಸುಧಾಕರ್ ಮೇಲೆ ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಯತ್ನ ಮಾಡಿದ್ದಾರೆ. ಸಚಿವ ಸುಧಾಕರ್ ಇವರಿಗೆ ನಿರಂತರ ತೊಂದರೆ ಕೊಡುತ್ತಿದ್ದಾರೆ. ಪೊಲೀಸರ ಮೂಲಕ‌ ಕಿರುಕುಳಕ್ಕೆ ಮುಂದಾಗಿದ್ದಾರೆ. ಇದನ್ನ ಸ್ಪಷ್ಟವಾಗಿ ಆ ಪತ್ರಕರ್ತರೆ ಬರೆದಿದ್ದಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಪಕ್ಷಕ್ಕೆ ಚೂರಿ ಹಾಕಿ ಬಂದವರು ನಿಮಗೆ ಚೂರಿ ಹಾಕೋದು ಬಹಳ ದೂರ ಇಲ್ಲ….

ಬಿಜೆಪಿಗೆ ಮಾನ ಮರ್ಯಾದೆ ಇದ್ದಿದ್ದರೆ ಸಚಿವರ ವಿರುದ್ದ ಈಗಾಗಲೇ ಎಫ್ ಐ ಆರ್ ಹಾಕಬೇಕಿತ್ತು. ಸಾಮಾನ್ಯರು ಇಂತಹ ಕೆಲಸ ಮಾಡಿದ್ರೆ ಇಲ್ಲಸಲ್ಲದ ಕೇಸ್ ಹಾಕ್ತಿರಿ. ಇಲ್ಲಿ ಖುದ್ದು ಸುಧಾಕರ್ ಅಲ್ಲಿನ ಲೋಕಲ್ ಎಸ್ ಪಿ ಮಿಥುನ್,ಪಿಎಸ್ಐ ಪಾಪಣ್ಣ ಹೆಸರು ಬರೆದಿದ್ದರು ಇನ್ನೂ ಸರ್ಕಾರ ಕ್ರಮಕೈಗೊಂಡಿಲ್ಲ. ನಮ್ಮ ರಾಜ್ಯದಲ್ಲಿ ಪತ್ರಕರ್ತರಿಗೆ ಈ ಸ್ಥಿತಿ ಆದರೆ ಸಾಮಾನ್ಯ ಜನರ ಕತೆ ಏನು. ಯಡಿಯೂರಪ್ಪ ನವರೇ ಕಾಂಗ್ರೆಸ್ ಪಕ್ಷಕ್ಕೆ ಚೂರಿ ಹಾಕಿ ಬಂದವರು ನಿಮಗೆ ಚೂರಿ ಹಾಕೋದು ಬಹಳ ದೂರ ಇಲ್ಲ. ನಿಮ್ಮ ಪಕ್ಷಕ್ಕೆ ಏನದ್ರೂ ತೊಂದರೆಯಾದ್ರೆ ಇವರೇ ಪ್ರಮುಖ ಕಾರಣ. ಯಡಿಯೂರಪ್ಪನವರೆ ಎಚ್ಚರಿಕೆಯಿಂದ ಇರೀ. ಕಾಂಗ್ರೆಸ್ ಪಕ್ಷದ ಬೆನ್ನಿಗೆ ಚೂರಿ ಹಾಕಿದ ಹಾಗೆ ನಿಮ್ಮ ಬೆನ್ನಿಗೂ ಚೂರಿಹಾಕುವ ದಿನಗಳು ದೂರ ಇಲ್ಲ ಎಂದು ಎಂ.ಲಕ್ಷ್ಮಣ್  ತಿಳಿಸಿದರು.

Key words: Journalist -L Ashwathanarayana -attempting suicide-minister- K Sudhakar -KPCC spokesperson- M Laxman