ರೈತರ ಹೋರಾಟ ಬೆಂಬಲಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಪ್ರತಿಭಟನೆ: ಕೇಂದ್ರದ ವಿರುದ್ಧ ಕುರುಬೂರು ಶಾಂತಕುಮಾರ್ ವಾಗ್ದಾಳಿ…

ಬೆಂಗಳೂರು,ಡಿಸೆಂಬರ್,25,2020(www.justkannada.in): ನೂತನ ಕೃಷಿಕಾಯ್ದೆ ವಿರೋಧಿಸಿ  ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಬೆಂಬಲಿಸಿ ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಅನಿರ್ದಿಷ್ಟಾವಧಿ ಧರಣಿ ಹತ್ತನೇ ದಿನಕ್ಕೆ ಕಾಲಿಟ್ಟಿದೆ.Teachers,solve,problems,Government,bound,Minister,R.Ashok

ಈ ನಡುವೆ ಇಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ನೇತೃತ್ವದ ಕಾರ್ಮಿಕರು  ರೈತರ ಹೋರಾಟಕ್ಕೆ ಬೆಂಬಲಿಸಿ ಧರಣಿ ನಡೆಸಿದರು. CITU,INTUC ,AIUTUC,HMS, HMKP NCL,AICCTU , UTUC ಸೇರಿದಂತೆ ಹಲವು ಕೇಂದ್ರ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಇಂದಿನ ಧರಣಿಯಲ್ಲಿ ಭಾಗವಹಿಸಿ ರೈತರ ಹೋರಾಟಕ್ಕೆ ಸಾಥ್ ನೀಡಿದರು.

ಈ ಧರಣಿಯನ್ನು ಉದ್ದೇಶಿಸಿ ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಎನ್ ಉಮೇಶ್ ಮಾತಾನಾಡಿ ,ಕೇಂದ್ರದ ಮೋದಿ ಸರ್ಕಾರ ದೇಶದ ರಾಜಧಾನಿಗೆ ರೈತರು ಬರದಂತೆ ತಡೆಯಲು ಎಲ್ಲಾ ಪ್ರಯತ್ನಗಳನ್ನು ನಡೆಸಿದರೂ ಆ ಎಲ್ಲಾ ಪ್ರಯತ್ನಗಳನ್ನು ವಿಫಲಗೊಳಿಸಿ ಕಳೆದ ಮೂವತ್ತು ದಿನದಿಂದ ಲಕ್ಷಾಂತರ ರೈತರು ಪ್ರತಿಭಟಿಸುತ್ತಿದ್ದಾರೆ.ಈ ಪ್ರತಿರೋಧ ಈಗಾಗಲೇ ಇತಿಹಾಸ ನಿರ್ಮಿಸಿದ್ದು ಇದಕ್ಕೆ ದೇಶವ್ಯಾಪಿ ಎಲ್ಲಾ ಜನರ  ಬೆಂಬಲ ಸಿಗುತ್ತಿದ್ದು ಈ ಹೋರಾಟ ಜಯಗಳಿಸುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತ್ರಿವಳಿ ತಲಾಖ್ ನಿಷೇಧಿಸಿ ದೊಡ್ಡ ಪ್ರಚಾರ ಮಾಡಿಕೊಂಡ ಪ್ರಧಾನಿ ಮೋದಿ ಈಗ ಈ ತ್ರಿವಳಿ ಕೃಷಿ ಕಾನೂನುಗಳ ಮೂಲಕ ಇಡೀ ಕೃಷಿ ಯಿಂದ ರೈತರಿಗೆ ತಲಾಖ್ ಕೊಡಿಸುತ್ತಿದೆ. ಇದು ಕಾರ್ಪೊರೇಟ್ ಪರ ಇರುವ ಕಾನೂನು ಇದರಿಂದ ದುಡಿಯುವ ಜನರನ್ನು ದಿವಾಳಿಯಾಗುತ್ತಾರೆ. ಸಂಸತ್ತಿನಲ್ಲಿ ಇರುವ ಬಹುಮತವನ್ನು ದುರುಪಯೋಗ ಮಾಡಿಕೊಂಡು ಜನ ದ್ರೋಹಿ ಕಾನೂನು ಅಂಗೀಕರಿಸಿದ್ದರೂ  ಬೀದಿಯಲ್ಲಿ ನಡೆಯುವ ಜನ ಹೋರಾಟದಲ್ಲಿ ತಿರಸ್ಕರಿಸಲಾಗಿದೆ ಎಂದರು.

ಇದೇ ವೇದಿಕೆಯಲ್ಲಿ ಉಪಸ್ಥಿತರಿದ್ದ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ರೈತ ದಲಿತ  ಕಾರ್ಮಿಕ ದುಡಿಯುವ ವರ್ಗವನ್ನು ದಮನ ಮಾಡಲು ಕೇಂದ್ರ ಸರ್ಕಾರ ಕಾನೂನು ರೂಪಿಸುತ್ತಿದೆ, ಲಕ್ಷಾಂತರ ರೈತರು ಯಲ್ಲಿ ಶಾಂತಿಯುತವಾಗಿ 30 ದಿನಗಳಿಂದ ಚಳುವಳಿ ನಡೆಸುತ್ತಿರುವುದನ್ನು ಕೇಂದ್ರ ಸರ್ಕಾರ ಸಹಿಸಿಕೊಳ್ಳಲು ಸಾಧ್ಯವಾಗದೆ ವಿಲವಿಲ ಒದ್ದಾಡುತ್ತಿದೆ, ರೈತರ ಹೋರಾಟ ಗೆಲ್ಲಬೇಕು  ರೈತರಿಗೆ ನ್ಯಾಯ ಸಿಗಬೇಕು ಎಂಬ ಛಲದಿಂದ ಹೋರಾಟ ನಡೆಸುತ್ತಿದ್ದಾರೆ, ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರನ್ನು ರಕ್ಷಿಸಲು, ದೇಶದ ಕಾರ್ಮಿಕರು ದಲಿತರು ರೈತರು ಒಗ್ಗೂಡಿ ಹೋರಾಟ ನಡೆಸುತ್ತಿರುವುದು ಐತಿಹಾಸಿಕವಾಗಿದೆ, ಈ ಚಳುವಳಿ ದಮನ ಮಾಡಲು ಕೇಂದ್ರ ಸರ್ಕಾರ ವಿಭಿನ್ನ ರೀತಿಯ ಪ್ರಯತ್ನಗಳನ್ನು ನಡೆಸುತ್ತ ವಿಫಲವಾಗಿದೆ ಎಂದರು.Joint Committee of Labor Organization- protests-support-farmer- Kurumbur Shanthakumar

ಟಿಯುಸಿಸಿ ರಾಷ್ಟ್ರೀಯ ನಾಯಕ ಜಿ ಆರ್ ಶಿವಶಂಕರ್,INTUC ಮುಖಂಡ ಶಾಮಣ್ಣರೆಡ್ಡಿ , ಧರಣಿ ಉದ್ದೇಶಿಸಿ ಮಾತಾನಾಡಿದರು.

ಪ್ರತಿಭಟನೆಯಲ್ಲಿ JCTU ರಾಜ್ಯ ಸಂಚಾಲಕ ಕೆ.ವಿ.ಭಟ್ ,INTUC ರಾಜ್ಯ ಅಧ್ಯಕ್ಷ ಪ್ರಕಾಶ್ HMS ನ ನಾಯಕ ನಾಗನಾಥನ್ ,AICCTU ಅಪ್ಪಣ್ಣ ಹಾಗೂ ಮಣಿ, ಕಟ್ಟಡ ಕಾರ್ಮಿಕರ ಸಂಘಟನೆ ರಾಜ್ಯ ಅಧ್ಯಕ್ಷ ಕೆ.ಮಹಾಂತೇಶ್, ಸಿಐಟಿಯು ರಾಜ್ಯ ಉಪಾಧ್ಯಕ್ಷೆ ಲೀಲಾವತಿ ,AIUTUC ಯ ಷಣ್ಮುಖ NCL ನ ಲೀಲಾವತಿ RKS ನ ದಿವಾಕರ್ , ರಾಜ್ಯ ಕಬ್ಬು ಬೆಳೆಗಾರರ ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ್, ಪ್ರಾಂತ ರೈತ ಸಂಘದ ಟಿ ಯಶವಂತ,  ಕರ್ನಾಟಕ ಜನ ಶಕ್ತಿ ಯ ಸಿರಿಮನೆ ನಾಗರಾಜ್, ಮುಂತಾದವರು  ಪಾಲ್ಗೊಂಡಿದ್ದರು.

Key words: Joint Committee of Labor Organization- protests-support-farmer- Kurumbur Shanthakumar