ಮೈಸೂರು,ಅಕ್ಟೋಬರ್,16,2025 (www.justkannada.in): ರಾಜ್ಯದಲ್ಲಿ ಉದ್ಯೋಗ ಕ್ರಾಂತಿ ಉಂಟು ಮಾಡಲು ಸಂಕಲ್ಪ ತೊಟ್ಟ ಕೌಶಲ್ಯಾಭಿವೃದ್ಧಿ ಇಲಾಖೆಯು ರಾಜ್ಯದ ವಿವಿಧ ಕಡೆಗಳಲ್ಲಿ ಉದ್ಯೋಗ ಮೇಳ ಆಯೋಜಿಸಿದ್ದು, ಶುಕ್ರವಾರ(ನಾಳೆ) ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ “ಬೃಹತ್ ಉದ್ಯೋಗ ಮೇಳ” ಆಯೋಜಿಸಿದೆ.
ಮೈಸೂರಿನ ಜಿಲ್ಲೆಯ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಮೈಸೂರು ವಿಭಾಗ ಮಟ್ಟದ ಬೃಹತ್ ಉದ್ಯೋಗ ಮೇಳದಲ್ಲಿ 24000 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. 221 ಕಂಪನಿಗಳು ಭಾಗವಹಿಸಲಿದೆ. ಉದ್ಯೋಗ ಮೇಳದ ಕುರಿತು ಮಾಹಿತಿ ಪಡೆದುಕೊಂಡಿರುವ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ, ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವಡಾ. ಶರಣಪ್ರಕಾಶ್ ಆರ್ ಪಾಟೀಲ್, ಆಕಾಂಕ್ಷಿಗಳಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಸೂಚಿಸಿದ್ದಾರೆ.
ನೋಂದಣಿ ಮಾಡಿಕೊಳ್ಳಿ
ಉದ್ಯೋಗ ಮೇಳದಲ್ಲಿ ಭಾಗವಹಿಸಲು ನೇರವಾಗಿ ಕಾರ್ಯಕ್ರಮದ ದಿನದಂದು ಆಗಮಿಸಿಯೂ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
45000 ಉದ್ಯೋಗ ದೊರೆಯುವ ನಿರೀಕ್ಷೆ
ಉದ್ಯೋಗ ಮೇಳದಲ್ಲಿ 221 ಕಂಪನಿಗಳು ಭಾಗವಹಿಸಲು ಹೆಸರು ನೋಂದಾಯಿಸಿಕೊಂಡಿದೆ. ಸುಮಾರು 45000 ಉದ್ಯೋಗ ದೊರೆಯುವ ನಿರೀಕ್ಷೆ ಇದೆ. ಹೆಸರು ನೋಂದಾಯಿಸಿಕೊಂಡು ಉದ್ಯೋಗ ಮೇಳದಲ್ಲಿ ಭಾಗವಹಿಸಿದ ನಂತರ ಉದ್ಯೋಗ ಸಿಗದೇ ಇರುವ ಅಭ್ಯರ್ಥಿಗಳ ವಿವರವನ್ನು ಸಹ ಪಡೆದುಕೊಂಡು ಅವರಿಗೆ ಬೇಕಿರುವ ಕೌಶಲ್ಯಗಳ ಬಗ್ಗೆ ತರಬೇತಿಯನ್ನು ನೀಡಲಾಗುವುದು.
ಉದ್ಯೋಗ ಮೇಳದ ಯಶಸ್ವಿ
ಈ ಹಿಂದೆ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ನಡೆಸಿದ 6 ಉದ್ಯೋಗ ಮೇಳದಲ್ಲಿ 12966 ಅಭ್ಯರ್ಥಿಗಳು ಉದ್ಯೋಗ ಪಡೆದುಕೊಂಡಿದ್ದಾರೆ. ಕಾಲೇಜುಗಳ ಸಹಯೋಗದೊಂದಿಗೆ ನಡೆಸಿದ 3 ಉದ್ಯೋಗ ಮೇಳದಲ್ಲಿ 1177 ಅಭ್ಯರ್ಥಿಗಳಿಗೆ ಉದ್ಯೋಗ ದೊರೆತಿದೆ.
ENGLISH SUMMARY…
Mega Job Fair in Mysuru
Dr. Sharanaprakash R. Patil reviews preparations
24,000 candidates and 221 companies registered
Minister directs officials to ensure all facilities for job seekers
Aiming to usher in an employment revolution in the state, the Department of Skill Development is organizing job fairs across Karnataka. On Friday, a “Mega Job Fair” will be held in the cultural capital, Mysuru.
The division-level job fair, to be held at the Maharaja College Grounds in Mysuru, has already seen registration from 24,000 candidates and 221 participating companies.
Minister for Medical Education, Skill Development, Entrepreneurship and Livelihood and Raichur District In-charge Dr. Sharanaprakash R. Patil reviewed the preparations and directed officials to ensure that all necessary facilities are provided to the job aspirants.
A total of 221 companies have registered to participate, and around 45,000 job openings are expected to be available. Details of candidates who do not secure employment at the fair will also be collected, and they will be offered training in relevant skill areas to improve their employability. Candidates can also register directly at the venue on the day of the event to participate in the job fair.
In the six job fairs organized earlier at the taluk and district levels, 12,966 candidates secured employment. Additionally, 1,177 candidates got jobs through three job fairs conducted in collaboration with various colleges.
Key words: Job Fair, Mysore, preparations, Dr. Sharanaprakash Patil