Saturday, August 1, 2026

BDA Apartments

Home Crime ಕರ್ನಾಟಕ ಸೇರಿ ದೇಶದ ಹಲವೆಡೆ ಜೆಎಂಬಿ ಶಂಕಿತ ಉಗ್ರರು ಸಕ್ರಿಯ: ಕಟ್ಟೆಚ್ಚರ ವಹಿಸುವಂತೆ ಎಲ್ಲಾ ರಾಜ್ಯಗಳಿಗೂ...

ಕರ್ನಾಟಕ ಸೇರಿ ದೇಶದ ಹಲವೆಡೆ ಜೆಎಂಬಿ ಶಂಕಿತ ಉಗ್ರರು ಸಕ್ರಿಯ: ಕಟ್ಟೆಚ್ಚರ ವಹಿಸುವಂತೆ ಎಲ್ಲಾ ರಾಜ್ಯಗಳಿಗೂ ಎನ್ ಐಎ ಸೂಚನೆ…

ನವದೆಹಲಿ,ಅ,14,2019(www.justkannada.in): ಜಮಾತ್ ಉಲ್ ಮುಜಾಹಿದ್ದೀನ್ ಎಂಬ ಬಾಂಗ್ಲಾದೇಶಿ ಭಯೋತ್ಪಾದನಾ ಸಂಘಟನೆ ಕರ್ನಾಟಕ ಸೇರಿ ದೇಶದ ಹಲವೆಡೆ ಸಕ್ರಿಯವಾಗಿದೆ ಎಂದು ಎನ್ ಐಎ ಐಜಿ ಅಲೋಕ್ ಮಿತ್ತಾಲ್ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮಾಹಿತಿ ಬಹಿರಂಗಪಡಿಸಿರುವ ಎನ್ ಐಎ ಐಜಿ ಅಲೋಕ್ ಮಿತ್ತಾಲ್, ಕರ್ನಾಟಕ, ಕೇರಳಾ, ಮಹಾರಾಷ್ಟ್ರ ಸೇರಿ ದೇಶದ ಹಲವೆಡೆ 125 ಜೆಎಂಬಿ ಶಂಕಿತ ಉಗ್ರರು ಸಕ್ರಿಯರಾಗಿದ್ದಾರೆ. ಬೆಂಗಳೂರಿನಲ್ಲಿ 20 ರಿಂದ 22 ಉಗ್ರರ ಅಡಗುತಾಣ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.

ಶಂಕಿತ ಉಗ್ರರು ಆರ್ ಎಸ್ ಎಸ್ ನಾಯಕರನ್ನ ಟಾರ್ಗೆಟ್ ಮಾಡಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರಗಳಿಗೆ ಮಾಹಿತಿ ನೀಡಿದ್ದೇವೆ. ರಾಜ್ಯ ಸರ್ಕಾರ, ಕೇಂದ್ರಾಡಳಿತ ಪ್ರದೇಶದಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ಎಲ್ಲಾ ರಾಜ್ಯಗಳಿಗೂ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ಅಲೋಕ್ ಮಿತ್ತಾಲ್ ಹೇಳಿದರು.

Key words: JMB –terrorist-active – country -Karnataka -NIA IG Alok Mittal -Information