JK EXCLUSIVE :  ದಾಖಲೆ ಮೊತ್ತಕ್ಕೆ ಮೈಸೂರು ಅಭಿವೃದ್ಧಿ ಪ್ರಾಧಿಕಾರದ (MDA) ನಿವೇಶನ ಹಾರಾಜು.!

SHOKING NEWS: Mysore Development Authority sites auctioned for record amount…! The first public auction of plots held by the Mysore Development Authority since its formation has helped the authority raise a “bumper” amount. The record sale of plots at the auction has given real estate entrepreneurs a boost.

vtu

ಮೈಸೂರು, ಆ.22,2025: ಮೈಸೂರು ಅಭಿವೃದ್ಧಿ ಪ್ರಾಧಿಕಾರ ರಚನೆಯಾದ ಬಳಿಕ ಇದೇ ಮೊಟ್ಟ ಮೊದಲ ಬಾರಿ ಕರೆದಿದ್ದ ನಿವೇಶನಗಳ ಬಹಿರಂಗ ಹರಾಜು ಪ್ರಾಧಿಕಾರಕ್ಕೆ “ಬಂಪರ್  “ ಮೊತ್ತ ಸಂಗ್ರಹಿಸಲು ನೆರವಾಗಿದೆ. ನಿವೇಶನಗಳ ಹರಾಜು ದಾಖಲೆ ಮೊತ್ತಕ್ಕೆ ಮಾರಾಟವಾಗಿರುವುದು ರಿಯಲ್ ಎಸ್ಟೇಟ್ ಉದ್ಯಮಿಗಳನ್ನು  ಉಬ್ಬೇರಿಸುವಂತೆ ಮಾಡಿದೆ.

ಕೆಲ ದಿನಗಳ ಹಿಂದಷ್ಟೆ ಆನ್ ಲೈನ್ ಹರಾಜು ಆಹ್ವಾನಿಸಲಾಗಿತ್ತು. ಈ ಹರಾಜಿನಲ್ಲಿ ಆಸಕ್ತಿ ವಹಿಸಿ ಅನೇಕರು ಬಿಡ್ ನಲ್ಲಿ ಭಾಗವಹಿಸಿದ್ದರು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹೆಸರು ಬದಲಾಗಿ ಮೈಸೂರು ಅಭಿವೃದ್ಧಿ ಪ್ರಾಧಿಕಾರವಾದ ಮೇಲೆ ಇದೇ ಮೊದಲ ನಿವೇಶನಗಳ  ಬಹಿರಂಗ ಹರಾಜು ಪ್ರಕ್ರಿಯೆಯಾಗಿತ್ತು. ಎಂಡಿಎ ನೂತನ  ಆಯುಕ್ತರಾಗಿ  ಕೆ.ಆರ್. ರಕ್ಷಿತ್  ಅವರನ್ನು ನೇಮಕಗೊಳಿಸಲಾಗಿತ್ತು. ಅಧಿಕಾರ ವಹಿಸಿಕೊಂಡ ಬಳಿಕ ಪ್ರಾಧಿಕಾರದ ವ್ಯವಸ್ಥೆಯನ್ನು ಸರಿದಾರಿಗೆ ತರುವಲ್ಲಿ ಶ್ರಮಿಸಿದ ರಕ್ಷಿತ್ ಕೆಲ ದಿನಗಳಲ್ಲೇ ಖಾಲಿ ನಿವೇಶನಗಳ ಪಟ್ಟಿ ಸಿದ್ಧಪಡಿಸಿ ಬಹಿರಂಗ ಹರಾಜಿಗೆ ಪ್ರಕಟಣೆ ಹೊರಡಿಸಿದರು.

ಈ ನಿರ್ಧಾರದಿಂದ ಈಗ ಪ್ರಾಧಿಕಾರಕ್ಕೆ ಕೋಟ್ಯಾಂತರ ರೂ. ಆದಾಯ ಸಂಗ್ರಹಗೊಂಡಿದೆ. ಮಾಹಿತಿಗಳ ಪ್ರಕಾರ  ದಾಖಲೆ ಮೊತ್ತಕ್ಕೆ ಹರಾಜುಗೊಂಡ ನಿವೇಶನಗಳ ಮಾಹಿತಿ ಹೀಗಿದೆ…

ವಿಜಯನಗರ 4 ನೇ ಹಂತ, 2 ನೇ ಫೇಸ್ ನ ನಿವೇಶನ ಸಂಖ್ಯೆ 109/4 (600 sqft – 20 X 30 )  ಹರಾಜು ಮೊತ್ತ  2 ಕೋಟಿ ರೂ. ನಿವೇಶನದ ಚದರ ಅಡಿ ಮೊತ್ತ 33,000 ರೂ.

ಅದೇ ರೀತಿ ವಿಜಯನಗರ 4 ನೇ ಹಂತ, 2 ನೇ ಫೇಸ್ ನ ನಿವೇಶನ ಸಂಖ್ಯೆ 10298 (4000 sqft- 50X80)  ಹರಾಜು ಮೊತ್ತ 9 ಕೋಟಿ ರೂ.  ನಿವೇಶನದ ಚದರ ಅಡಿ ಮೊತ್ತ 22500 ರೂ.

ಗಗನಕ್ಕೇರಿದ ಬೆಲೆ :

ಈ ಹರಾಜು ಪ್ರಕ್ರಿಯೆಯಿಂದ  ಈಗ ಮೈಸೂರು ನಗರದಲ್ಲಿ ನಿವೇಶನಗಳ ಬೆಲೆ ಗಗನಕ್ಕೇರಿದಂತಾಗಿದೆ. ರಾಜಧಾನಿ ಬೆಂಗಳೂರು ನಗರದಲ್ಲಿ ಈಗಾಗಲೇ ನಿವೇಶನಗಳ ಬೆಲೆ ಮುಗಿಲು ಮುಟ್ಟಿದ್ದು ಮಧ್ಯಮ ವರ್ಗದವರಿಗೆ ನಿವೇಶನ ಖರೀದಿ ಗಗನ ಕುಸುಮವಾಗಿದೆ. ಈಗ ಮೈಸೂರು ನಗರಲ್ಲೂ ಮುಂಬರುವ ದಿನಗಳಲ್ಲಿ ಅದೇ ಸ್ಥಿತಿ ನಿರ್ಮಾಣವಾಗುವ ಲಕ್ಷಣಗಳು ಈ ಹರಾಜು ಪ್ರಕ್ರಿಯೆಯಿಂದ ಗೋಚರಿಸುತ್ತಿದೆ.

ಪ್ರಾಧಿಕಾರ ಹರಾಜು ಮಾಡಿದ ನಿವೇಶನಗಳ ಮೊತ್ತ ಈ ಮಟ್ಟದಲ್ಲಿ ಏರಿಕೆಗೊಂಡಿರುವ ಕಾರಣ,  ಇನ್ಮುಂದೆ ಮೈಸೂರಿನ  ಇತರೆ ನಿವೇಶನಗಳ ಮಾರಾಟದ ಮೇಲೆ ಪರಿಣಾಮ ಬೀರುತ್ತದೆ ಎಂದು ರಿಯಲ್ ಎಸ್ಟೇಟ್ ಉದ್ಯಮಿಗಳು  “ ಜಸ್ಟ್ ಕನ್ನಡ ” ಗೆ ಅಭಿಪ್ರಾಯ ವ್ಯಕ್ತಪಡಿಸಿದರು.

key words: SHOKING NEWS, Mysore Development Authority, sites auctioned, record amount

vtu

SUMMARY:

SHOKING NEWS: Mysore Development Authority sites auctioned for record amount…!

The first public auction of plots held by the Mysore Development Authority since its formation has helped the authority raise a “bumper” amount. The record sale of plots at the auction has given real estate entrepreneurs a boost.