ಸಿಎಂ ಬಳಿಗೆ ಜಿಂದಾಲ್ ಜಟಾಪಟಿ: ಕೆಪಿಸಿಸಿ ಅಂಗಳದಲ್ಲಿ ಮಾತುಕತೆ ವಿಫಲ

ಬೆಂಗಳೂರು:ಜೂ-9: ಜಿಂದಾಲ್ ಕಂಪನಿಗೆ ಎಕರೆಗೆ 1.22 ಲಕ್ಷ ರೂ.ನಂತೆ 3,667 ಎಕರೆ ಭೂಮಿ ನೀಡುವ ಸರ್ಕಾರದ ತೀರ್ವನದ ವಿರುದ್ಧ ಸಮರ ಸಾರಿರುವ ಮಾಜಿ ಸಚಿವ ಎಚ್.ಕೆ. ಪಾಟೀಲ್ ಅವರನ್ನು ಸಮಾಧಾನ ಪಡಿಸಲು ಕೈಗಾರಿಕೆ ಸಚಿವ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ಸಾಧ್ಯವಾಗಿಲ್ಲ.

ಶನಿವಾರ ಪಕ್ಷದ ಕಚೇರಿಯಲ್ಲಿ ಎಚ್.ಕೆ.ಪಾಟೀಲ್, ಸಚಿವ ಕೆ.ಜೆ.ಜಾರ್ಜ್ ಅವರನ್ನು ಕರೆಸಿಕೊಂಡಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಎರಡೂ ವಾದಗಳನ್ನು ಆಲಿಸಿದರು. ಈ ರೀತಿ ಬಹಿರಂಗ ಅಭಿಪ್ರಾಯದಿಂದ ಸರ್ಕಾರದ ಮೇಲೆ ಬೇರೆ ರೀತಿಯ ಜನಾಭಿಪ್ರಾಯ ಬರುತ್ತದೆ ಎಂದು ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟರು. ಆದರೆ, ಪಾಟೀಲ್ ಮಾತ್ರ ತಮ್ಮ ನಿಲುವಿನಿಂದ ಕಿಂಚಿತ್ತೂ ಹಿಂದೆ ಸರಿಯಲಿಲ್ಲ ಎನ್ನಲಾಗಿದೆ.

ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ಜಿಂದಾಲ್​ಗೆ ಭೂಮಿ ನೀಡಿದ ಬಗ್ಗೆ ಪಾಟೀಲ್ ಆಕ್ಷೇಪಿಸಿದ್ದರು. ಹೀಗಾಗಿ ಜಾರ್ಜ್ ಹಾಗೂ ಪಾಟೀಲ್ ಜತೆ ಸಭೆ ನಡೆಸಲಾಯಿತು. ರಾಜ್ಯದ ಹಿತದೃಷ್ಟಿಯಿಂದ ಉತ್ತಮ ತೀರ್ವನಕ್ಕೆ ಬಂದಿದ್ದೇವೆ ಎಂದರು. ಸಚಿವ ಜಾರ್ಜ್ ಮಾತನಾಡಿ, ಭಾನುವಾರ ಸಿಎಂ ಜತೆ ರ್ಚಚಿಸಿ, ನಂತರ ಉತ್ತಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.

ನಾವೆಲ್ಲರೂ ಒಟ್ಟಿಗೆ ರ್ಚಚಿಸಿದ್ದೇವೆ. ರಾಜ್ಯದ ಹಿತ ಕಾಪಾಡುವ ನಿರ್ಣಯಕ್ಕೆ ಬರಲಾಗಿದೆ. ಭಾನುವಾರ ಅಂತಿಮ ನಿರ್ಣಯ ಹೊರಬರಲಿದೆ. ದಿನೇಶ್, ಜಾರ್ಜ್ ಸಿಎಂ ಜತೆ ರ್ಚಚಿಸಿ ಉತ್ತಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಪಾಟೀಲ್ ಹೇಳಿದರು.

ಬಿಜೆಪಿ ಯುವ ಮೋರ್ಚಾ ಹೋರಾಟ

ಮೈತ್ರಿ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಡುವ ಸಲುವಾಗಿ ವಿವಿಧ ಹಂತಗಳಲ್ಲಿ ಹೋರಾಟ, ಜಾಗೃತಿ ಅಭಿಯಾನ ನಡೆಸುವ ಕುರಿತು ರಾಜ್ಯ ಬಿಜೆಪಿ ಯುವ ಮೋರ್ಚಾ ನಿರ್ಧರಿಸಿದೆ. ರಾಜ್ಯ ಬಿಜೆಪಿ ಕಚೇರಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಬಿ.ವೈ. ವಿಜಯೇಂದ್ರ ಹಾಗೂ ತಮ್ಮೇಶ್​ಗೌಡ ನೇತೃತ್ವದಲ್ಲಿ ಸಭೆ ನಡೆದಿದ್ದು, ಹೋರಾಟದ ಮೊದಲ ಭಾಗವಾಗಿ ಜಿಂದಾಲ್​ಗೆ ಭೂಮಿ ಹಂಚಿಕೆ ವಿರುದ್ಧ ಜೂನ್ 11ಕ್ಕೆ ಪ್ರತಿಭಟನೆ ನಡೆಯಲಿದೆ.

ರಾಜ್ಯ ಸರ್ಕಾರ ಜಿಂದಾಲ್ ಕಂಪನಿಗೆ ಭೂಮಿ ನೀಡಲು ತೀರ್ವನಿಸುವಲ್ಲಿ ಜವಾಬ್ದಾರಿಯಿಂದ ವರ್ತಿಸಿಲ್ಲ. ಎಚ್.ಕೆ. ಪಾಟೀಲ್ ಮತ್ತು ಬಿ.ಎಸ್. ಯಡಿಯೂರಪ್ಪ ಅವರು ಎತ್ತಿರುವ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಲಿ. ಸಮಗ್ರ ತನಿಖೆ ಆಗುವವರೆಗೆ ಯಾವುದೇ ಪ್ರಕ್ರಿಯೆ ನಡೆಯಬಾರದು.

| ಪ್ರಲ್ಹಾದ ಜೋಶಿ ಕೇಂದ್ರ ಸಚಿವ

ಜೆಎಸ್​ಡಬ್ಲ್ಯು ಸಂಸ್ಥೆ ಎಲ್ಲ ವ್ಯವಹಾರ ಕಾನೂನುಬದ್ಧವಾಗಿ ಮಾಡುತ್ತಿದೆ, ಅಕ್ರಮವಾಗಿ ಯಾವುದೇ ಕೆಲಸ ಮಾಡಿಲ್ಲ. ಸಂಸ್ಥೆಯ ಭೂ ಖರೀದಿ ವಿಚಾರ ರಾಜಕೀಯಗೊಂಡಿರುವುದು ದುರದೃಷ್ಟಕರ. ಎಲ್ಲರ ಪ್ರಶ್ನೆಗಳಿಗೂ ಉತ್ತರಿಸಲು ಸಾಧ್ಯವಿಲ್ಲ.

| ಸಜ್ಜನ್ ಜಿಂದಾಲ್ ಜೆಎಸ್​ಡಬ್ಲ್ಯು ಸಮೂಹ ಸಂಸ್ಥೆಗಳ ಅಧ್ಯಕ್ಷ
ಕೃಪೆ:ವಿಯವಾಣಿ

ಸಿಎಂ ಬಳಿಗೆ ಜಿಂದಾಲ್ ಜಟಾಪಟಿ: ಕೆಪಿಸಿಸಿ ಅಂಗಳದಲ್ಲಿ ಮಾತುಕತೆ ವಿಫಲ
jindal-steel-state-govt-cm-hd-kumaraswamy-kpcc-h-k-patil