ಜ್ಯೋತಿಷಿ ಬಳಿ ಚಿನ್ನಾಭರಣ, ನಗದು ದರೋಡೆ : ಸುಪಾರಿ ನೀಡಿದ್ಧ ಮಹಿಳಾ ಪಿಎ ಅಂಡ್ ಗ್ಯಾಂಗ್ ಬಂಧನ.

ಬೆಂಗಳೂರು,ಜುಲೈ,13,2022(www.justkannada.in): ಜ್ಯೋತಿಷಿ ಕೈಕಾಲು ಕಟ್ಟಿ ಚಿನ್ನಾಭರಣ ಮತ್ತು ಹಣವನ್ನ ದೋಚಿದ್ಧ ಆರೋಪಿಗಳನ್ನ ಕೆಂಗೇರಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಜ್ಯೋತಿಷಿ ಪ್ರಮೋದ್ ಮನೆ ದರೋಡೆಗೆ ಸುಪಾರಿ ನೀಡಿದ್ದ ಮೇಘನಾ ಮತ್ತು ದರೋಡೆ ಮಾಡಿದ್ದ ಗ್ಯಾಂಗ್ ಅನ್ನು ಪೊಲೀಸರು ತಮಿಳುನಾಡಿನ ಸೇಲಂನಲ್ಲಿ ಬಂಧಿಸಿ ಕರೆತಂದಿದ್ದಾರೆ. ಮೇಘನಾ ಜ್ಯೋತಿಷಿ  ಪ್ರಮೋದ್ ಪಿಎ ಆಗಿ ಕೆಲಸ ಮಾಡಿಕೊಂಡಿದ್ದಳು.ganja peddlers arrested by mysore police

ಈ ಮಧ್ಯೆ ಜ್ಯೋತಿಷಿ ಸಾಲ ನೀಡಿದ ಹಿನ್ನೆಲೆ ಪಿಎ ಮೇಘನಾ ದರೋಡೆಗೆ ಮೂವರಿಗೆ ಸುಪಾರಿ ನೀಡಿದ್ದಳು ಎನ್ನಲಾಗಿದೆ. ಮೇಘನಾ ಜು.10ರಂದು ಜ್ಯೋತಿಷಿ ಜೊತೆ ಕಚೇರಿಯಲ್ಲಿದ್ದಳು. ಈ ವೇಳೆ ಆಕೆ  ಕಚೇರಿಗೆ ಎಂಟ್ರಿ ಕೊಟ್ಟ  ದರೋಡೆಕೋರರು  ಜ್ಯೋತಿಷಿ ಪ್ರಮೋದ್  ಮೇಲೆ ಹಲ್ಲೆ ಮಾಡಿ ಮನೆಯಲ್ಲಿದ್ದ 250 ಗ್ರಾಂ ಚಿನ್ನಾಭರಣ, 5 ಲಕ್ಷ ನಗದು ದೋಚಿದ್ದರು.ಬಳಿಕ ಬೆಂಗಳೂರಿನ ಮನೆಯೊಂದರಲ್ಲಿ ಚಿನ್ನಾಭರಣ ಬಚ್ಚಿಟ್ಟಿದ್ದರು. ಪೊಲೀಸರು ಬಂದಾಗಲೂ ಏನೂ ಆಗದಂತೆ ಮೇಘನಾ ನಟಿಸಿದ್ದಳು. ಬಳಿಕ ಮೇಘನಾ ಮತ್ತು ಆಕೆ ಟೀಂ ಸೇಲಂಗೆ ಪರಾರಿಯಾಗಿತ್ತು.

ನಾಲ್ವರು ದುಷ್ಕರ್ಮಿಗಳ ಚಲನವಲನ ಸಿಸಿಕ್ಯಾಮರಾದಲ್ಲಿ ಸೆರೆಯಾಗಿತ್ತು. ಇದೀಗ ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Key words: Jewelery – cash-robbery-Jyotishi-PA – Gang -Arrested