ಜೆಡಿಎಸ್ ಅಪ್ಪ ಮಕ್ಕಳ ಆಸ್ತಿ : ವಿರೋಧ ನಾಯಕ ಸಿದ್ದರಾಮಯ್ಯ ಟೀಕೆ

ಬೆಂಗಳೂರು,ಡಿಸೆಂಬರ್,13,2020(www.justkannada.in) : ಜೆಡಿಎಸ್ ಅಪ್ಪ ಮಕ್ಕಳ ಆಸ್ತಿ. ದೇವೇಗೌಡರು, ಕುಮಾರಸ್ವಾಮಿ ಹೇಳಿದ್ದೇ ನಿಜ. ಏನಾದರೂ, ಅವರ ವಿರುದ್ಧ ನಡೆದರೆ ಹೊರಹಾಕ್ತಾರೆ. ನನ್ನಂಥವನನ್ನೇ ಪಕ್ಷದಿಂದ ಹೊರಹಾಕಿದರು ಎಂದು ವಿರೋಧ ನಾಯಕ ಸಿದ್ದರಾಮಯ್ಯ ಹೇಳಿದರು.logo-justkannada-mysoreಜಿಲ್ಲೆಯ ಗುಳೇದಗುಡ್ಡ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಈಗ ಚುನಾವಣೆ ಇರೋದು ಕಾಂಗ್ರೆಸ್ ಬಿಜೆಪಿ ಮಧ್ಯದಲ್ಲಿ ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ. ನಾನು ಅಹಿಂದ ಅಂತಾ ಮಾತಾಡಿದ್ದಕ್ಕೆ ಹೊರಹಾಕಿದರು. ದೇವೇಗೌಡರು ಅಹಿಂದ ಬೇಡ ಎಂದರು. ನಾನು ಯಾರೇ ಬಂದರೂ ನಿಲ್ಲಿಸೋದಿಲ್ಲ ಎಂದು ಉತ್ತರಿಸಿದೆ.

ದೇವರೆ ಬಂದು ಹೇಳಿದರೂ, ನಿಲ್ಲಿಸೋದಿಲ್ಲ ಅಂದೆ. ಅದಕ್ಕೆ ನನ್ನನ್ನು ಉಚ್ಚಾಟನೆ ಮಾಡಿಬಿಟ್ರು. ಆಮೇಲೆ, ಕಾಂಗ್ರೆಸ್ ಗೆ ಬಂದೆ. ಅಲ್ಲಿ ಎಲ್ಲರೂ ಸ್ವಾಗತ ಮಾಡಿದರು. ಜೊತೆಗೆ, ನನ್ನನ್ನು ಮುಖ್ಯಮಂತ್ರಿಯಾಗಿ ನೀವೆಲ್ಲರೂ ಮಾಡಿದ್ರಿ ಎಂದು ಹೇಳಿದರು.

ರಾಜಕೀಯ ನಿಂತ ನೀರಲ್ಲ, ಕಾಲಚಕ್ರ ತಿರುಗುತ್ತಿರುತ್ತದೆ

ಗ್ರಾಪಂ ಚುನಾವಣೆಯ ಸಂಬಂಧ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಆಸ್ತಿ. ಅಂತಸ್ತು ರಾಜಕೀಯ ಯಾವುದೂ ಲೆಕ್ಕಕ್ಕಿಲ್ಲ. ನಾವು ಜನಸೇವಕರು, ಕೆಳಹಂತದಿಂದ ಇಲ್ಲಿಗೆ, ಬಂದಿದ್ದೇವೆ. 1980ರಲ್ಲಿ ಕೇವಲ ಎರಡೇ ಸೀಟ್ ಗೆದ್ದಿದ್ದ ಬಿಜೆಪಿಯವರು ಈಗ ಕಾಂಗ್ರೆಸ್ ಮುಕ್ತ ಭಾರತ ಎಂದು ಹೇಳುತ್ತಾರೆ. ಆದರೆ,ರಾಜಕೀಯ ನಿಂತ ನೀರಲ್ಲ. ಕಾಲಚಕ್ರ ತಿರುಗುತ್ತಿರುತ್ತದೆ ಎಂದರು.

ದೇಶಕ್ಕಾಗಿ ಬಿಜೆಪಿಯವರ ಕೊಡುಗೆ ಶೂನ್ಯ ಮಾತೆತ್ತಿದರೆ ನಾವು ಹಿಂದೂಗಳು ಅಂತಾರೆ. ನಾನು ಹಿಂದೂ, ಮಹಾತ್ಮಾ ಗಾಂಧಿಯವರ ತತ್ವದ ಹಿಂದೂ, ಬಿಜೆಪಿಯವರು ಸಾವರ್ಕರ್ ಪಾಲಿಸಿ ಹಿಂದೂಗಳು ಎಂದು ಹೇಳಿದರು. ನನ್ನ ಹೆಸರೇ ಸಿದ್ದರಾಮಯ್ಯ ಸಿದ್ದರಾಮೇಶ್ವರ ನಮ್ಮ JDS-Dad's-children's-assets-Opposition-leader- Siddaramaiah ಮನೆ ದೇವರು. ಸಿದ್ದರಾಮೇಶ್ವರ ಹಿಂದೂ ದೇವರಾ? ಮುಸ್ಲಿಂ ದೇವರಾ? ಎಂದು ಪ್ರಶ್ನಿಸಿದರು.

 

 

key words : JDS-Dad’s-children’s-assets-Opposition-leader- Siddaramaiah