ಜೆಡಿಎಸ್ ಅಧಿಕಾರಕ್ಕೆ ಬಂದರೆ ಕುರುಬರಿಗೆ ಡಿಸಿಎಂ ಸ್ಥಾನ; ಹೆಚ್.ಡಿಕೆ ಹೇಳಿಕೆ ಸ್ವಾಗತಿಸಿದ ಸಿದ‍್ಧರಾಮಯ್ಯ.

ಕೋಲಾರ,ಫೆಬ್ರವರಿ,13,2023(www.justkannada.in): : ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೇ  ಕುರುಬರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುತ್ತೇವೆ ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಯನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ವಾಗತಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ಧರಾಮಯ್ಯ,ಜೆಡಿಎಸ್ ಅಧಿಕಾರಕ್ಕೆ ಬಂದರೆ ಕುರುಬರಿಗೆ ಡಿಸಿಎಂ ಹುದ್ದೆ ನೀಡುತ್ತೇವೆ ಎಂದಿದ್ದಾರೆ. ಡಿಸಿಎಂ ಹುದ್ದೆ ನೀಡಿದರೇ ಬಹಳ ಸಂತೋಷ ಎಂದರು.

ಚುನಾವಣೆ ಸಂದರ್ಭದಲ್ಲಿ ರಾಜ್ಯಕ್ಕೆ ಪದೇಪದೆ ಪ್ರಧಾನಿ ಮೋದಿ ಭೇಟಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಪ್ರಧಾನಿ ಮೋದಿ ರಾಜ್ಯಕ್ಕೆ ಬರಲಿಬಿಡಿ, ಬೇಡವೆಂದು ಹೇಳಲು ಆಗುತ್ತಾ? ಎಂದರು.

Key words: JDS-power-DCM -post – Kuruba-Siddaramaiah-welcome