ಜೆಡಿಎಸ್ ಪಕ್ಷ ಒಂದು ಕುಟುಂಬಕ್ಕೆ ಮಾತ್ರ ಸೀಮಿತ- ಸ್ವಪಕ್ಷದ ವಿರುದ್ಧವೇ ವಾಗ್ದಾಳಿ ನಡೆಸಿದ ಶಾಸಕ.

ಕೋಲಾರ,ಅಕ್ಟೋಬರ್.1,2021(www.justkannada.in):  ಜೆಡಿಎಸ್ ಪಕ್ಷದ ವರಿಷ್ಠರ ವಿರುದ್ಧವೇ ಸ್ವಪಕ್ಷದ ಶಾಸಕ ಶ್ರೀನಿವಾಸ್ ಗೌಡ ವಾಗ್ದಾಳಿ ನಡೆಸಿದ್ದಾರೆ. ಜೆಡಿಎಸ್ ಪಕ್ಷ ಒಂದು ಕುಟುಂಬಕ್ಕೆ ಮಾತ್ರ ಸೀಮಿತ. ಎಲ್ಲಾ ಅಧಿಕಾರ ಹೆಚ್.ಡಿ ದೇವೇಗೌಡರ ಕುಟುಂಬಕ್ಕೆ ಬೇಕು ಎಂದು ಶಾಸಕ ಶ್ರೀನಿವಾಸ್ ಗೌಡ ಹರಿಹಾಯ್ದಿದ್ದಾರೆ.

ಮಾಧ್ಯಮಗಳ ಜತೆ ಇಂದು ಮಾತನಾಡಿದ ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ, ನಾನು ಹಿರಿಯ ಶಾಸಕನಾಗಿದ್ದರೂ ಎಚ್.ಡಿ.ಕುಮಾರಸ್ವಾಮಿ ನನಗೆ ಸಚಿವ ಸ್ಥಾನ ನೀಡಲಿಲ್ಲ. 4 ಬಾರಿ ಶಾಸಕನಾಗಿದ್ದೆ, ನನಗೂ ಆಸೆ ಆಕಾಂಕ್ಷೆಗಳಿದ್ದವು. ಆದರೆ ಎಚ್.ಡಿ.ಕುಮಾರಸ್ವಾಮಿ ನನಗೆ ಮಂತ್ರಿ ಸ್ಥಾನ ನೀಡಲೇ ಇಲ್ಲ ಎಂದು  ಅಸಮಾಧಾನ ವ್ಯಕ್ತಪಡಿಸಿದರು.

ಡಿಸಿಸಿ ಬ್ಯಾಂಕ್ ವಿಚಾರದಲ್ಲಿ ನಡೆಯುತ್ತಿರುವ ಬೆಳವಣಿಗೆ ರಾಜಕೀಯ ಪ್ರೇರಿತವಾದದ್ದು. ಸಮಯ ಬಂದರೆ ವಿಧಾನಸಭಾ ಅಧಿವೇಶನದಲ್ಲಿ ಡಿಸಿಸಿ ಬ್ಯಾಂಕ್ ಬಗ್ಗೆ ಧ್ವನಿ ಎತ್ತುತ್ತೇನೆ ಎಂದು ಶ್ರೀನಿವಾಸ್ ಗೌಡ ತಿಳಿಸಿದರು.

Key words: JDS party -limited -one family-MLA-against -JDS