ತುಮಕೂರು,ಜನವರಿ,31,2026 (www.justkannada.in): ನಿಖಿಲ್ ಎಲ್ಲ ಸ್ಪರ್ಧೆ ಮಾಡುತ್ತಾರೆಂದು ನಿಗದಿಯಾದರೆ ಕಾಣದ ಕೈಗಳು ಕೆಲಸ ಶುರುಮಾಡುತ್ತವೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಚಾಮರಾಜನಗರದಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತಾವು ಸ್ಪರ್ಧೆ ಎಂಬ ವಿಚಾರ ಕುರಿತು ತುಮಕೂರಿನಲ್ಲಿ ಇಂದು ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ನಾನು ಕ್ಲಿಯರ್ ಆಗಿ ಹೇಳುತ್ತೇನೆ ಯಾವುದೇ ಗೊಂದಲ ಮಾಡೋದು ಬೇಡ. ಚಾಮರಾಜನಗರದಲ್ಲಿ ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರು ಹಿರಿಯ ನಾಯಕರಿದ್ದಾರೆ. ಯಾವುದು ಕ್ಷೇತ್ರಕ್ಕೆ ಮೂಗು ತೂರಿಸುವ ವ್ಯಕ್ತಿತ್ವ ನನ್ನದಲ್ಲ. ಸುದ್ದಿ ಆಗಬೇಕು ಎಂದು ನನ್ನ ಹೆಸರನ್ನು ತರುವುದು ಬೇಡ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಹೊರತು ಚಾಮರಾಜನಗರ ಅಥವಾ ಬೇರೆ ಕಡೆ ಸ್ಪರ್ಧಿಸಬೇಕು ಎಂಬ ಯೋಚನೆ ಇಲ್ಲ ಎಂದು ತಿಳಿಸಿದರು.
ನಿಖಿಲ್ ಕುಮಾರಸ್ವಾಮಿ ಎಲ್ಲಿ ಸ್ಪರ್ಧೆ ಮಾಡುತ್ತಾರೆ ಎಂದು ನಿಗದಿಯಾದರೆ, ಕಾಣದ ಕೈಗಳು ಕೆಲಸ ಶುರು ಮಾಡುತ್ತವೆ. ನಾನು ಎಲ್ಲಿ ನಿಲ್ಲಬೇಕು ಯಾವಾಗ ನಿಲ್ಲಬೇಕು ಎಂದು ಜನ ತೀರ್ಮಾನಿಸುತ್ತಾರೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
Key words: decide, compete, Election, JDS, Nikhil Kumaraswamy







