Sunday, September 20, 2026

BDA Apartments

ರಾಜ್ಯಸಭೆಗೆ ಸ್ಪರ್ಧಿಸುವಂತೆ ದೇವೇಗೌಡರಿಗೆ ಜೆಡಿಎಸ್ ಶಾಸಕರ ಮನವೊಲಿಕೆ BDA JK_Ad...
Home Front Page ರಾಜ್ಯಸಭೆಗೆ ಸ್ಪರ್ಧಿಸುವಂತೆ ದೇವೇಗೌಡರಿಗೆ ಜೆಡಿಎಸ್ ಶಾಸಕರ ಮನವೊಲಿಕೆ

ರಾಜ್ಯಸಭೆಗೆ ಸ್ಪರ್ಧಿಸುವಂತೆ ದೇವೇಗೌಡರಿಗೆ ಜೆಡಿಎಸ್ ಶಾಸಕರ ಮನವೊಲಿಕೆ

ಮೈಸೂರು, ಜೂನ್ 07, 2020 (www.justkannada.in): ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ರಾಜ್ಯಸಭೆಗೆ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ನಾವೆಲ್ಲ ದೇವೇಗೌಡರು ರಾಜ್ಯಸಭೆಗೆ ಸ್ಪರ್ಧೆ ಮಾಡಲಿ ಅಂತ ಒತ್ತಾಯಿಸಿದ್ದೇವೆ‌ ಎಂದು ಶಾಸಕ ಸಾರಾ ಮಹೇಶ್ ಹೇಳಿದರು.

ದೇವೇಗೌಡ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಮಂಗಳವಾರ ನಾಮಪತ್ರ ಸಲ್ಲಿಸಲು ಕೊನೆ ದಿನ. ನಾಳೆಯೂ ದೇವೇಗೌಡರನ್ನ ಮನವೋಲಿಸುತ್ತೇವೆ. ಒಪ್ಪಲಿಲ್ಲ ಅಂದ್ರೆ ಮಂಗಳವಾರ ಎಲ್ಲ ಜೆಡಿಎಸ್ ಶಾಸಕರು ಹೆಚ್‌ಡಿಡಿ ಮನೆಗೆ ಒಪ್ಪುವಂತೆ ಮಾಡುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬಾಕಿ ಬೇಕಾಗಿರುವ ಮತಗಳಿಗೆ ಯಾರ ಬಳಿ ಹೋಗಬೇಕು ಅಂತ ನಂತರ ಚರ್ಚೆ ಮಾಡ್ತೇವೆ. ಮೊದಲು ದೇವೇಗೌಡರು ಒಪ್ಪಲಿ ಆ ನಂತರ ಚರ್ಚೆ ಮಾಡೋಣ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಹೇಳಿದರು.