ಜೆಡಿಎಸ್ ಶಾಸಕ ಸಿ.ಎಸ್ ಪುಟ್ಟರಾಜು ಮನೆ ಮೇಲೆ ಕಲ್ಲೆಸೆತ

ಮಂಡ್ಯ,ಅಕ್ಟೋಬರ್,8,2021(www.justkannada.in): ಜೆಡಿಎಸ್   ಶಾಸಕ ಸಿ.ಎಸ್.ಪುಟ್ಟರಾಜು ಅವರ  ಮನೆ ಮೇಲೆ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿರುವ ಘಟನೆ ತಡರಾತ್ರಿ  ನಡೆದಿದೆ.

ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದಲ್ಲಿರುವ ಶಾಸಕ ಪುಟ್ಟರಾಜು ಅವರ ನಿವಾಸದ ಮೇಲೆ ಕಿಡಿಗೇಡಿಗಳು ಕಲ್ಲೆಸೆದು ಮನೆ ಕಿಟಕಿ ಗಾಜು ಪುಡಿಪುಡಿ ಮಾಡಿದ್ದಾರೆ. ಅಲ್ಲದೆ ರಸ್ತೆಯಲ್ಲಿ ನಿಲ್ಲಿಸಿದ್ದ 8 ಕಾರುಗಳ ಗಾಜು ಒಡೆದು ಅಟ್ಟಹಾಸ ಮೆರೆದಿದ್ದಾರೆ.

ಜತೆಗೆ ಖಾಸಗಿ ಬಸ್, ಶೋರೂಮ್ ಮೇಲೂ  ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ. ಶಾಸಕ ಸಿ.ಎಸ್.ಪುಟ್ಟರಾಜು ಬರ್ತ್ ಡೇ ಫ್ಲೆಕ್ಸ್ ಹರಿದು ಹಾಕಿದ್ದು. ಕಿಡಿಗೇಡಿಗಳ ದುಷ್ಕೃತ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಸಿ.ಎಸ್​. ಪುಟ್ಟರಾಜು. ಯಾರೋ ಹುಡುಗರು ಸೇರಿಕೊಂಡು ಕಲ್ಲು ಹೊಡೆದಿದ್ದಾರೆ. ಈಗಾಗಲೇ ಅವರನ್ನ ಅರೆಸ್ಟ್ ಕೂಡಾ ಮಾಡಲಾಗಿದೆ. ಅಂತಹ ದೊಡ್ಡ ಮಟ್ಟದಲ್ಲಿ ಎನೂ ಆಗಿಲ್ಲ ಎಂದು ತಿಳಿಸಿದ್ದಾರೆ.

Key words: JDS MLA- CS Putaraju house-stone-pandavapur