ಹಾಸನ,ಫೆಬ್ರವರಿ,8,2023(www.justkannada.in): ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರ ಕ್ಷೇತ್ರ ಹೊಳೆನರಸೀಪುರದಲ್ಲಿ ಇಂದು ಹಲವು ಮುಖಂಡರು ಹಾಗೂ ಕಾರ್ಯಕರ್ತರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.![]()
ಸಂಸದ ಡಿ.ಕೆ ಸುರೇಶ್ ನೇತೃತ್ವದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಪುಟ್ಟರಾಜು ಸೇರಿ ಹಲವರು ಕಾಂಗ್ರೆಸ್ ಸೇರ್ಪಡೆಯಾದರು. ಬಳಿಕ ಮಾತನಾಡಿದ ಡಿ.ಕೆ ಸುರೇಶ್, ಹೊಳೇನರಸೀಪುರದಲ್ಲಿನ ಬದಲಾವಣೆ ಇತಿಹಾಸದ ಪುಟ ಸೇರಬೇಕು. ಬಿಗಿ ಹಿಡಿತ ಹಾಗೂ ಬಿಗಿಯಾದ ವಾತಾವರಣ ಈ ಕ್ಷೇತ್ರದಲ್ಲಿದೆ. ನಾವು ನಿಮ್ಮ ನೋವಿಗೆ ಸ್ಪಂದಿಸುವ ಕೆಲಸ ಮಾಡುತ್ತೇವೆ.
ಕೆಲವರು ಪೊಲೀಸರನ್ನ ಇಟ್ಟುಕೊಂಡು ಹೆದರಿಸುತ್ತಿದ್ದಾರೆ . ಕಾನೂನು ರಕ್ಷಣೆ ಮಾಡುವವರು ಒಬ್ಬರ ಪರ ಕೆಲಸ ಮಾಡಬಾರದು ಈ ರೀತಿ ನಡೆದುಕೊಂಡುರೇ ಮುಂದಿನ ದಿನ ಬೆಲೆ ತೆರಬೇಕಾಗುತ್ತದೆ. ಹೊಳೆ ಕ್ಷೇತ್ರದಿಂದಲೇ ಬದಲಾವಣೆ ಗಾಳಿ ಆರಂಭವಾಗಿದೆ. ಎಂದು ಡಿ.ಕೆ ಸುರೇಶ್ ತಿಳಿಸಿದರು.
Key words: jds-leaders-joined-Congress-Holenarasipur-MP-DK Suresh







