ಜೆಡಿಎಸ್ ಗೆ ಒಂದು ಸಿದ್ಧಾಂತ ಅನ್ನೋದು ಇಲ್ಲ: ಬಿಜೆಪಿ ಜೊತೆ ಹೋದ್ರೆ ಜಾತ್ಯಾತೀತನಾ..?  ಹೆಚ್.ಡಿಕೆ ವಿರುದ್ಧ ಸಿಎಂ ಸಿದ್ಧರಾಮಯ್ಯ ಕಿಡಿ..

ಬೆಂಗಳೂರು,ಜುಲೈ,17,2023(www.justkannada.in): ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ವಿಚಾರ ಹಾಗೂ ಸಭೆಗೆ ಆಹ್ವಾನಿಸಿಲ್ಲ ಎಂಬ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸಿಎಂ ಸಿದ್ಧರಾಮಯ್ಯ, ಜೆಡಿಎಸ್ ಗೆ ಒಂದು ಸಿದ್ಧಾಂತ ಅನ್ನೋದು ಇಲ್ಲ.  ಬಿಜೆಪಿ ಜೊತೆಹೋದ್ರೆ ಜಾತ್ಯಾತೀತನಾ..?  ಸಿದ್ದಾಂತ ಬಲಿ ಕೊಟ್ಟುಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದಾರೆ. ಪಕ್ಷ ಉಳಿಸಿಕೊಳ್ಳಲು ಸಿದ್ಧಾಂತ ಬಲಿ ಕೊಡ್ತಾರೆ. ವಿಪಕ್ಷದವರನ್ನ ಮೊದಲು ಆಹ್ವಾನಿಸಿದ್ದು ಅವರೇ ಅಲ್ಲವೇ..?   ನಾನು ಸಿಎಂ ಆಗ್ತಿದ್ದೀನಿ ಬನ್ನಿ ಅಂತ ಕರೆದಿರಲಿಲ್ವಾ..? ಎಂದು ಹೆಚ್.ಡಿ ಕುಮಾರಸ್ವಾಮಿಗೆ ಟಾಂಗ್ ನೀಡಿದರು.

ದೇಶದ ಆರ್ಥಿಕತೆಯನ್ನು ಹಾಳು ಮಾಡಿದ್ದೇ ಬಿಜೆಪಿಯವರು. ಮೋದಿ ಪ್ರಧಾನಿಯಾದ ಮೇಲೆ ಬೆಲೆ ಏರಿಕೆ, ಆರ್ಥಿಕತೆ ಹಾಳಾಗಿದೆ. ಜನರು ಬದುಕಲು ಸಾಧ್ಯವಾಗದ ರೀತಿಯಾಗಿದೆ ಎಂದರು.

ಬಿಜೆಪಿ ಮುಗಿಸಲು ವಿಪಕ್ಷಗಳು ಒಂದಾಗಿವೆ ಅನ್ನೋ ಆರೋಪ ವಿಚಾರವಾಗಿ ಮಾತನಾಡಿದ ಸಿದ್ಧರಾಮಯ್ಯ , ಕರ್ನಾಟಕ ರಾಜ್ಯದಲ್ಲಿ ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲಿಲ್ವಾ. ರಾಜ್ಯದಲ್ಲಿ 28 ಕಡೆ ಪ್ರಧಾನಮಂತ್ರಿ ಮೋದಿ ಪ್ರಚಾರ ಮಾಡಿದ್ದರು. ಪ್ರಧಾನಿ ಮೋದಿ ಪ್ರಚಾರ ಮಾಡಿದ ಕಡೆಯಲ್ಲೆಲ್ಲಾ ನಾವು ಗೆದ್ದಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ & ಮಿತ್ರಪಕ್ಷಗಳು ಸೋಲಲಿವೆ. ಯುಪಿಎ ನೇತೃತ್ವದ ಮೈತ್ರಿಕೂಟಕ್ಕೆ ಗೆಲುವು ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Key words: JDS – ideology-secular – BJP- CM Siddaramaiah