2023ರಲ್ಲಿ ಜೆಡಿಎಸ್ ಪಕ್ಷ ಬಿಟ್ಟು ಸರ್ಕಾರ ರಚಿಸಲು ಆಗಲ್ಲ- ಹೆಚ್.ಡಿ ಕುಮಾರಸ್ವಾಮಿ.

ಬೆಂಗಳೂರು,ಜನವರಿ,26,2022(www.justkannada.in):  2023ರಲ್ಲಿ ಜೆಡಿಎಸ್ ಬಿಟ್ಟು ಸರ್ಕಾರ ರಚಿಸಲು ಆಗಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಮಾಧ್ಯಮಗಳ ಜತೆ ಇಂದು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ,   ಮುಂದಿನ ವಿಧಾನಸಭೆ  ಅಧಿವೇಶನದಿಂದಲೇ ನಮ್ಮ ಹೋರಾಟ ನಡೆಯಲಿದೆ. ಸೋಂಕು ಕಡಿಮೆಯಾದ ಬಳಿಕ ಹೋರಾಟ ಮುಂದುವರೆಯಲಿದೆ.  ಕಲಾಪದಲ್ಲಿ ಎರಡು ಪಕ್ಷಗಳ ಬಂಡವಾಳ ಬಿಚ್ಚಿಡುತ್ತೇನೆ. ಚುನಾವಣೆಗೂ ಮುನ್ನ ಎರಡು ಪಕ್ಷಗಳ ಬಂಡವಾಳ ಬಯಲು ಮಾಡುತ್ತೇನೆ. 2023ಕ್ಕೆ  ಜೆಡಿಎಸ್ ಪಕ್ಷ ಬಿಟ್ಟು ಸರ್ಕಾರ ರಚಿಸಲು ಆಗಲ್ಲ ಎಂದು ಹೇಳಿದರು.

ಕಾಂಗ್ರೆಸ್ ಬಿಜೆಪಿ ನಡುವೆ ಜಂಪಿಂಗ್ ಪಾಲಿಟಿಕ್ಸ್ ನಡೆಯುತ್ತಿದೆ. ಬಿಜೆಪಿಯವರು ಸಂಪರ್ಕದಲ್ಲಿದ್ದಾರೆಂದು ಕಾಂಗ್ರೆಸ್ ನವರು, ಕಾಂಗ್ರೆಸ್ ನವರು ಸಂಪರ್ಕದಲ್ಲಿದ್ದಾರೆಂದು ಬಿಜೆಪಿಯವರು ಹೇಳುತ್ತಿದ್ದಾರೆ. ಯಾರು ಯಾವ ಪಕ್ಷದ ಬಾಲಂಗೂಂಚಿ ಎಂದು ಗೊತ್ತುಗುತ್ತಿದೆ.  ಜೆಡಿಎಸ್ ಬಿಜೆಪಿ ಬಿ ಟೀಂ ಅಂತಿದ್ದ ಸಿದ್ಧರಾಮಯ್ಯ ಏನು ಹೇಳ್ತಾರೆ.  ನಮ್ಮದು ಚಿಕ್ಕ ಪಕ್ಷ. ನಮ್ಮಲ್ಲಿ ಚಿಕ್ಕ  ನಾಯಕರು ಬರ್ತಾರೆ ಎಂದು ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

Key words:  JDS – 2023 – government- H. D. Kumaraswamy.