Thursday, September 17, 2026

BDA Apartments

Home Front Page ವೈದ್ಯರು ಇರಲಿಲ್ಲ ಎಂಬ ಸುದ್ದಿ ಸತ್ಯಕ್ಕೆ ದೂರ: ಜಯದೇವ ಸಂಸ್ಥೆಗೆ ಮಸಿ ಬಳಿಯುವ ಕೆಲಸ ಬೇಡ-...

ವೈದ್ಯರು ಇರಲಿಲ್ಲ ಎಂಬ ಸುದ್ದಿ ಸತ್ಯಕ್ಕೆ ದೂರ: ಜಯದೇವ ಸಂಸ್ಥೆಗೆ ಮಸಿ ಬಳಿಯುವ ಕೆಲಸ ಬೇಡ- ಡಾ.ದಿನೇಶ್ 

ಮೈಸೂರು,ಜೂನ್,17,2026 (www.justkannada.in):  ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ 11 ರೋಗಿಗಳ ಸಾವಿಗೆ ವೈದ್ಯರಿಲ್ಲದಿರುವುದೇ ಕಾರಣ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಈ ಬಗ್ಗೆ  ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ದಿನೇಶ್  ಸ್ಪಷ್ಟನೆ ನೀಡಿದ್ದಾರೆ.

ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ  ಡಾ.ದಿನೇಶ್, ವೈದ್ಯರು ಇರಲಿಲ್ಲ ಎಂಬ ಸುದ್ದಿ ಸತ್ಯಕ್ಕೆ ದೂರವಾದುದ್ದು. ಪ್ರತಿನಿತ್ಯ 600 ರಿಂದ 800 ಜನ ಹೊರ ರೋಗಿಗಳು ಆಸ್ಪತ್ರೆಗೆ ಬರುತ್ತಾರೆ. 100 ರಷ್ಟು ಜನ ಅಡ್ಮೆಂಟ್ ಆಗುತ್ತಾರೆ. ಈ ಪೈಕಿ ಬಹುತೇಕ ರೋಗಿಗಳು ತೀವ್ರ ಹೃದಯಾಘಾತ ಹೊಂದಿರುತ್ತಾರೆ. ನಮ್ಮಲ್ಲಿ ಟ್ರೀಟ್ ಮೆಂಟ್ ಫಸ್ಟ್. ಇಂದು ಆಸ್ಪತ್ರೆಯಲ್ಲಿ ನಿಧನರಾದ 11 ಜನ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದರು. ನಮ್ಮ ವೈದ್ಯರು ಈ ಎಲ್ಲಾ ರೋಗಿಗಳಿಗೂ ನಮ್ಮ ವೈದ್ಯರು ಟ್ರೀಟ್ ಮೆಂಟ್ ನೀಡಿದ್ದಾರೆ. ಸಾವನ್ನಪ್ಪಿರುವ ರೋಗಿಗಳು ಒಂದೇ ದಿನ ಅಡ್ಮಿಟ್ ಆದವರಲ್ಲ. ಹಲವು ದಿನಗಳಿಂದ ಅಡ್ಮಿಟ್ ಆದವರು ಇಂದು ಸಾವನ್ನಪ್ಪಿದ್ದಾರೆ. 11 ಜನರು ಕೂಡ 60 ವರ್ಷ ವಯಸ್ಸಿನ ಮೇಲ್ಪಟ್ಟವರು ಎಂದು ಮಾಹಿತಿ ನೀಡಿದರು.ವೈದ್ಯರು ಇರಲಿಲ್ಲ ಎಂಬ ಸುದ್ದಿ ಸತ್ಯಕ್ಕೆ ದೂರ jayadeva

ಸಂಸ್ಥೆಗೆ ಮಸಿ ಬಳಿಯುವ ಕೆಲಸ ಮಾಡೋದು ಬೇಡ

ರಾತ್ರಿ ಪಾಳಯದಲ್ಲಿ ನಾಲ್ಕು ಜನ ವೈದ್ಯರು ಇದ್ದೆ ಇರುತ್ತಾರೆ. ವೈದ್ಯರು ಇರಲಿಲ್ಲ ಎಂಬ ಸುದ್ದಿ ಸತ್ಯಕ್ಕೆ ದೂರವಾದದ್ದು. ಜಯದೇವ ಆಸ್ಪತ್ರೆ ಅಂತ ರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಇಂತಹ ಸಂಸ್ಥೆಗೆ ಮಸಿ ಬಳಿಯುವ ಕೆಲಸ ಮಾಡೋದು ಬೇಡ. ವಾರದ ಪ್ರಾರಂಭದ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ರೋಗಿಗಳು ಆಸ್ಪತ್ರೆಗೆ ಬರ್ತಾರೆ. ನಮ್ಮಲ್ಲಿ 5 ರಿಂದ 7% ವೈದ್ಯರ ಕೊರತೆ ಇದೆ. ಈ ಕಾರಣಕ್ಕಾಗಿಯೇ ಪರ್ಮನೆಂಟ್ ಹುದ್ದೆಗಳನ್ನ ಕರೆಯಲಾಗಿದೆ. ಬೆಂಗಳೂರು, ಮೈಸೂರು ಎರಡು ಆಸ್ಪತ್ರೆಗಳಿಗೆ 25 ಪರ್ಮನೆಂಟ್ ವೈದ್ಯರ ನೇಮಕಾತಿಗೆ ಕರೆ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆ ಕೂಡ ಬಗೆಹರಿಯಲಿದೆ ಎಂದು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ ದಿನೇಶ್ ತಿಳಿಸಿದರು.ಜಯದೇವ ಸಂಸ್ಥೆಗೆ ಮಸಿ ಬಳಿಯುವ ಕೆಲಸ ಬೇಡ jk02

Key words: Mysore Jayadeva Institute, Patient death, Director, Dr. Dinesh