ಬೆಂಗಳೂರು, ಮೇ 29, 2021 (www.justkannada.in): ಕೊರೊನಾ ಕಂಟಕದ ಹಿನ್ನೆಲೆಯಲ್ಲಿ ಜಪಾನ್ನಲ್ಲಿ ತುರ್ತು ಪರಿಸ್ಥಿತಿ ವಿಸ್ತರಣೆಯಾಗಿದೆ. ಹೀಗಾಗಿ ಪ್ರೇಕ್ಷಕರಿಲ್ಲದೆ ಒಲಿಂಪಿಕ್ಸ್ ಆಯೋಜಿಸಲು ಚಿಂತನೆ ನಡೆದಿದೆ.
ಟೋಕಿಯೊ ಒಲಿಂಪಿಕ್ಸ್ ಆಯೋಜಿಸುವ ಪ್ರಯತ್ನದಲ್ಲಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಮತ್ತು ಜಪಾನ್ ಸರ್ಕಾರ ನಾನಾ ಸರ್ಕಸ್ ಮಾಡತೊಡಗಿದೆ.
ಸ್ಥಳೀಯರ ವಿರೋಧದ ಹಿನ್ನೆಲೆಯಲ್ಲಿ ಟೋಕಿಯೊ ಒಲಿಂಪಿಕ್ನ ಸಂಘಟನಾ ಸಮಿತಿ ಪ್ರೇಕ್ಷಕರ ಕ್ರೀಡಾಕೂಟ ಆಯೋಜನೆಗೆ ಯೋಚಿಸುತ್ತಿದೆ.
ಜುಲೈ 23 ರಿಂದ ಆಗಸ್ಟ್ 8 ರವರೆಗೆ ಒಲಿಂಪಿಕ್ ಕ್ರೀಡಾಕೂಟ ನಡೆಯಲಿದೆ. ಈ ಆಟಗಳನ್ನು ಕಳೆದ ವರ್ಷ ಮುಂದೂಡಲಾಗಿತ್ತು.






